ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಐಪಿಎಲ್ 2018: ಹೈದರಾಬಾದ್ ವಿರುದ್ಧ ಬೆಂಗಳೂರಿಗೆ 14 ರನ್ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ 2018ರ ಪಂದ್ಯಾವಳಿಯ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್​ ರೈಸರ್ಸ್​ ಹೈದರಾಬಾದ್ ನ್ನು 14 ರನ್ ಗಳಿಂದ....

ಐಪಿಎಲ್ 2018: ಹೈದರಾಬಾದ್ ವಿರುದ್ಧ ಬೆಂಗಳೂರಿಗೆ 14 ರನ್
Raghavendra Adiga
Updated On : 18 May 2018, 12:20 pm
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2018ರ ಪಂದ್ಯಾವಳಿಯ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್​ ರೈಸರ್ಸ್​ ಹೈದರಾಬಾದ್ ನ್ನು 14 ರನ್ ಗಳಿಂದ ಮಣಿಸಿ ವಿಜಯಿಯಾಗಿದೆ.
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟ್ ಮಾಡಿದ ಬೆಂಗಳೂರು ತಂಡ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 218 ರನ್ ಕಲೆ ಹಾಕಿತ್ತು. 
ಆರ್​ಸಿಬಿ ಪರವಾಗಿ ಎಬಿ ಡಿವಿಲಿಯರ್ಸ್​(69), ಮೋಯಿನ್​ ಅಲಿ​(65), ಕೋಲಿನ್​ ಡಿ ಗ್ರ್ಯಾಂಡ್​ ಹೋಮ್​(40) ಹಾಗೂ ಸರ್ಫರಾಜ್​ ಖಾನ್​(22) ಉತ್ತಮ ಪ್ರದರ್ಶನ  ನಿಡಿದ್ದರು.

Advertisement

Advertisement

ಹೈದರಾಬಾದ್ ಪರವಾಗಿ ರಶಿದ್​ ಖಾನ್​ ಮೂರು ವಿಕೆಟ್, ಸಿದ್ದಾರ್ಥ್​ ಕೌಲ್​ ಎರಡು, ಸಂದೀಪ್​ ಶರ್ಮಾ ಒಂದು ವಿಕೆಟ್​ ಪಡೆದರು.
ಆರ್​ಸಿಬಿ ಯಿಂದ 219 ರನ್ ಗುರಿ ಪಡೆದ ಹೈದರಾಬಾದ್ ನಿಗದಿತ ಓವರ್ ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 204 ರನ್ ಗಳಿಸಿಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿತ್ತು.
ಹೈದರಾಬಾದ್ ತಂಡದ ಪರವಾಗಿ ಕೇನ್​ ವಿಲಿಯಮ್ಸನ್​(81) ಮನೀಶ್​ ಪಾಂಡೆ(62*) ಹಾಗೂ ಅಲೆಕ್ಸ್​(37) ತಂಡಕ್ಕೆ ಉತ್ತಮ ರನ್ ಕೊಡುಗೆ ನಿಡಿದ್ದರು.
ಬೆಂಗಳೂರಿನ ಬೌಲರ್ ಗಳಾದ ಯಜುವೇಂದ್ರ ಚಹಾಲ್​, ಯಜುವೇಂದ್ರ ಚಹಾಲ್​ ಹಾಗೂ ಮೋಯಿನ್ ಅಲಿ ತಾವುಗಳು ಒಂದೊಂದು ವಿಕೆಟ್ ಪಡೆದು ಮಿಂಚಿದ್ದರು.
ಬೆಂಗಳೂರು ತಂಡ ಈ ಗೆಲುವಿನೊಡನೆ ಮತ್ತೆ ಪ್ಲೇ ಆಫ್ ಗೆ ತೆರಳುವ ತನ್ನ ಕನಸಿಗೆ ರೆಕ್ಕೆ ಮೂಡಿಸಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement