ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ 
ಕ್ರಿಕೆಟ್

ಕೀಪರ್‌ಗೆ ಕ್ಯಾಚ್ ನೀಡಿ ಹೋಗುತ್ತಿದ್ದ ರೋಹಿತ್ ಶರ್ಮಾರನ್ನು ಕೊಹ್ಲಿ ಕೂಗಿ ಕರೆದಿದ್ದೇಕೆ? ವಿಡಿಯೋ ವೈರಲ್!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕೀಪರ್‌ಗೆ ಕ್ಯಾಚ್ ನೀಡಿ ಹೋಗುತ್ತಿದ್ದ ರೋಹಿತ್ ಶರ್ಮಾರನ್ನು ತಂಡದ ನಾಯಕ ವಿರಾಟ್ ಕೊಹ್ಲಿ...

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕೀಪರ್‌ಗೆ ಕ್ಯಾಚ್ ನೀಡಿ ಹೋಗುತ್ತಿದ್ದ ರೋಹಿತ್ ಶರ್ಮಾರನ್ನು ತಂಡದ ನಾಯಕ ವಿರಾಟ್ ಕೊಹ್ಲಿ ಮರಳಿ ಬರುವಂತೆ ಕೂಗಿ ಕರೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ. 
ಕೇರಳದ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅಜೇಯ 63 ರನ್ ಸಿಡಿಸಿ ತಂಡ ಗೆಲ್ಲಲು ಕಾರಣರಾಗಿದ್ದರು. 
ಈ ಪಂದ್ಯದಲ್ಲಿ ರೋಹಿತ್ ಶರ್ಮಾ 18 ರನ್ ಗಳಿಸಿದ್ದಾಗ ವಿಂಡೀಸ್ ಆಟಗಾರ ಥಾಮಸ್ ಎಸೆತವನ್ನು ಶಾಟ್ ಹೊಡೆಯಲು ಮುಂದಾದರೂ ಆದರೆ ಚೆಂಡು ಬ್ಯಾಟ್ ಗೆ ಸ್ನಿಕ್ ಆಗಿ ಕೀಪರ್ ಕೈ ಸೇರಿತು. ಈ ವೇಳೆ ತಾನು ಔಟ್ ಆದೆ ಎಂದು ಭಾವಿಸಿ ರೋಹಿತ್ ಶರ್ಮಾ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿದ್ದರು. ಅಷ್ಟರಲ್ಲಿ ನಾನ್-ಸ್ಟ್ರೈಕ್ ನಲ್ಲಿದ್ದ ವಿರಾಟ್ ಕೊಹ್ಲಿ ಜೋರಾಗಿ ಕೂಗಿ ಕರೆದರು. 
ಕೊಹ್ಲಿ ಕರೆದಾಗ ಹಿಂದಕ್ಕೆ ತಿರುಗಿ ನೋಡಿದಾಗ ಅಂಪೈರ್ ನೋ ಬಾಲ್ ಕೊಟ್ಟಿರುವುದು ಗೊತ್ತಾಗಿದೆ. ನಂತರ ಬಂದ ಆರ್ಭಟಿಸಿದ ರೋಹಿತ್ ಶರ್ಮಾ ಭರ್ಜರಿ ಅರ್ಧ ಶತಕ ಸಿಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT