ಕ್ರಿಕೆಟ್

ಐಸಿಸಿ ಹಾಲ್ ಆಫ್ ಫೇಮ್ ಗೆ ಟೀಂ ಇಂಡಿಯಾ 'ವಾಲ್' ಆಫ್ ಗೇಮ್!

Srinivasamurthy VN
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ನೀಡುವ ಪ್ರತಿಷ್ಠಿತ ಐಸಿಸಿ 'ಹಾಲ್ ಆಫ್ ಫೇಮ್' ಗೌರವಕ್ಕೆ ಭಾರತೀಯ ಕ್ರಿಕೆಟ್ ನ ದಂತಕಥೆ ಮತ್ತು ಟೀಂ ಇಂಡಿಯಾದ 'ದಿ ವಾಲ್' ರಾಹುಲ್ ದ್ರಾವಿಡ್ ಪಾತ್ರರಾಗಿದ್ದಾರೆ.
ಆ ಮೂಲಕ ಐಸಿಸಿ ನೀಡುವ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಭಾರತದ ಐದನೇ ಆಟಗಾರ ಎಂಬ ಕೀರ್ತಿಗೂ 'ಸವ್ಯಸಾಚಿ' ದ್ರಾವಿಡ್ ಪಾತ್ರರಾಗಿದ್ದಾರೆ. ದ್ರಾವಿಡ್ ಗೂ ಮೊದಲು ಈ ಪ್ರತಿಷ್ಠಿತ ಗೌರವಕ್ಕೆ ಕರ್ನಾಟಕದ ಮತ್ತೋರ್ವ ದಂತಕಥೆ ಅನಿಲ್ ಕುಂಬ್ಳೆ, ಬಿಷನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, ಕಪಿಲ್ ದೇವ್ ಪಾತ್ರರಾಗಿದ್ದರು. ಅವರ ಬಳಿಕ ರಾಹುಲ್ ದ್ರಾವಿಡ್ ರನ್ನು ಈ ಗೌರವ ಅರಸಿ ಬಂದಿದೆ.
ಸಚಿನ್ ಗೂ ಸಿಗದ ಗೌರವ ಕರ್ನಾಟಕದ ಹೆಮ್ಮೆಗೆ ಒಲಿಯಿತು
ಭಾರತ ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿದ್ದ ಸಚಿನ್ ತೆಂಡೂಲ್ಕರ್ ಅವರಿಗೂ ಧಕ್ಕದ ಗೌರವ ಕನ್ನಡಿಗ ಮತ್ತು ಕರ್ನಾಟಕದ ಹೆಮ್ಮೆ ದ್ರಾವಿಡ್ ರನ್ನು ಅರಸಿಕೊಂಡು ಬಂದಿದೆ. ಇನ್ನು ದ್ರಾವಿಡ್ 164 ಟೆಸ್ಟ್ ಪಂದ್ಯಗಳಲ್ಲಿ 36 ಶತಕಗಳೊಂದಿಗೆ 13,288 ರನ್ ಗಳಿಸಿದ್ದಾರೆ. ಅಂತೆಯೇ ರಾಹುಲ್ 210 ಕ್ಯಾಚ್ ಪಡೆದಿದ್ದಾರೆ. 344 ಏಕದಿನ ಪಂದ್ಯಗಳಲ್ಲಿ 10,889 ರನ್ ಗಳಿಸಿರುವ ದ್ರಾವಿಡ್, 12 ಶತಕ ಗಳಿಸಿದ್ದಾರೆ. ಪ್ರಸ್ತುತ ದ್ರಾವಿಡ್ ಟೀಂ ಇಂಡಿಯಾ ಅಂಡರ್ 19 ತಂಡದ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ನೇತೃತ್ವದಲ್ಲೇ ಪೃಥ್ವಿಶಾ ನಾಯಕತ್ವದ ಟೀಂ ಇಂಡಿಯಾ ಅಂಡರ್ 19 ವಿಶ್ವಕಪ್ ಗೆದ್ದಿತ್ತು.
ಇದೇ ವೇಳೆ, ಆಸ್ಟ್ರೇಲಿಯನ್ ದಂತಕಥೆ ರಿಕಿ ಪಾಂಟಿಂಗ್ ಮತ್ತು ಇಂಗ್ಲೆಂಡ್ ವನಿತೆಯರ ತಂಡದ ಮಾಜಿ ಆಟಗಾರ್ತಿ ಕ್ಲೇರ್ ಟೇಲರ್ ಸಹ ಇದೇ ಶ್ರೇಯ ಪಡೆದಿದ್ದಾರೆ.
SCROLL FOR NEXT