ಸಂಗ್ರಹ ಚಿತ್ರ 
ಕ್ರಿಕೆಟ್

ವಿಂಡೀಸ್ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಹಿಟ್ ಮ್ಯಾನ್ 'ದ್ವಿಶತಕ' ಸಾಧನೆ!

ವೆಸ್ಟ್ ಇಂಡೀಸ್ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಹಿಟ್ ಮ್ಯಾನ್ ದ್ವಿಶತಕದ ಸಾಧನೆ ಮಾಡಿದ್ದಾರೆ. ಅರೆ ವಿಂಡೀಸ್ ನೀಡಿದ್ದೇ 105 ರನ್ ಗಳ ಗುರಿ ರೋಹಿತ್ ಹೇಗೆ ದ್ವಿಶಕ ಮಾಡಿದರು ಎಂಬುದು ನಿಮ್ಮ ಪ್ರಶ್ನೆಯಾದರೆ ಈ ಸುದ್ದಿ ಓದಿ....

ತಿರುವನಂತಪುರಂ: ವೆಸ್ಟ್ ಇಂಡೀಸ್ ವಿರುದ್ಧ ಏದನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಹಿಟ್ ಮ್ಯಾನ್ ದ್ವಿಶತಕದ ಸಾಧನೆ ಮಾಡಿದ್ದಾರೆ. ಅರೆ ವಿಂಡೀಸ್ ನೀಡಿದ್ದೇ 105 ರನ್ ಗಳ ಗುರಿ ರೋಹಿತ್ ಹೇಗೆ ದ್ವಿಶಕ ಮಾಡಿದರು ಎಂಬುದು ನಿಮ್ಮ ಪ್ರಶ್ನೆಯಾದರೆ ಈ ಸುದ್ದಿ ಓದಿ....
ನಿರ್ಣಾಯಕವಾಗಿದ್ದ ವೆಸ್ಟ್​ ಇಂಡೀಸ್​ ವಿರುದ್ಧದ 5ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಹಿಟ್ ಮ್ಯಾನ್​ ರೋಹಿತ್ ಶರ್ಮಾ ಮಹತ್ವದ ಮೈಲಿಗಲ್ಲನ್ನು ನಿರ್ಮಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ತಮ್ಮದಾಗಿಸಿಕೊಂಡಿದ್ದಾರೆ. ಈಗಾಗಲೇ ಸರಣಿಯಲ್ಲಿ ಎರಡು ಶತಕ ಸಿಡಿಸಿ ಏಕದಿನ ಕ್ರಿಕೆಟ್ ನಲ್ಲಿ ಅತಿಹೆಚ್ಚು ಬಾರಿ 150 ರನ್ ಗಳಿಸಿದ ದಾಖಲೆ ಬರೆದಿರುವ ರೋಹಿತ್, ಈಗ ಸಿಕ್ಸರ್ ನಲ್ಲೂ ದ್ವಿಶತಕ ಸಾಧನೆ ಮಾಡಿದ್ದಾರೆ.
ಹೌದು.. ನಿನ್ನೆ ನೋಬಾಲ್ ರೂಪದಲ್ಲಿ ಜೀವದಾನ ಪಡೆದ ರೋಹಿತ್ ಕೇವಲ 56 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನಿಂದ 63 ರನ್ ಸಿಡಿಸಿದರು. ಅಲ್ಲದೆ ಈ ಪಂದ್ಯದಲ್ಲಿ ಎರಡು ಸಿಕ್ಸರ್ ಬಾರಿಸಿದಾಗ ರೋಹಿತ್ ಏಕದಿನ ಕ್ರಿಕೆಟ್ ನಲ್ಲಿ 200 ಸಿಕ್ಸರ್ ಬಾರಿಸಿದ ಸಾಧನೆ ಮಾಡಿದ್ದಾರೆ. ಆ ಮೂಲಕ ರೋಹಿತ್ ಶರ್ಮಾ ಮಹೇಂದ್ರ ಸಿಂಗ್ ಧೋನಿ ನಂತರ ಭಾರತದ ಪರ ಏಕದಿನ ಕ್ರಿಕೆಟ್ ನಲ್ಲಿ 200 ಸಿಕ್ಸರ್​ಗಳನ್ನ ಬಾರಿಸಿದ ಎರಡನೇ ಬ್ಯಾಟ್ಸ್ ಮನ್ ಎಂಬ ಕೀರ್ತಿಗೆ ಭಾಜನರಾದರು. 
ಧೋನಿ 218 ಸಿಕ್ಸರ್​ ಬಾರಿಸುವುದರ ಮೂಲಕ ಅತಿಹೆಚ್ಚು ಸಿಕ್ಸರ್​ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಸ್ಫೋಟಕ ಬ್ಯಾಟ್ಸ್ ಮನ್ ಶಾಹಿದ್​​ ಆಫ್ರಿದಿ 351 ಸಿಕ್ಸರ್ ಗಳ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. 275 ಸಿಕ್ಸರ್ ಸಿಡಿಸಿರುವ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ 2ನೇ ಸ್ಥಾನದಲ್ಲಿದ್ದು, 270 ಸಿಕ್ಸರ್ ಗಳ ಮೂಲಕ ಶ್ರೀಲಂಕಾ ಕ್ರಿಕೆಟ್ ದಂತಕಥೆ ಜಯಸೂರ್ಯ ಮೂರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 204 ಸಿಕ್ಸರ್ ಗಳ ಮೂಲಕ 5ನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

SCROLL FOR NEXT