ನವದೆಹಲಿ: ಅದೃಷ್ಟ ಎಂಬುವುದು ಜೀವನದ ಗತಿಯನ್ನೇ ಬದಲಾಯಿಸುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಭಾರತ ಮೂಲದ ಸಾಫ್ಟ್ ವೇರ್ ಟೆಕ್ಕಿಯೊಬ್ಬ ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಸೌರಭ್ ಇದೀಗ ಅಮೆರಿಕ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿರುವ ಭಾರತೀಯ. ಸೌರಭ್ 19ರ ವಯೋಮಿತಿಯೊಳಗಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಮುಂಬೈ ಪರ ಒಂದು ರಣಜಿ ಪಂದ್ಯವನ್ನೂ ಆಡಿದ್ದರು. ನಂತರ ಅದೆಲ್ಲ ಸಾಕು ಎಂದು ಅಮೆರಿಕದ ಕಾರ್ನೆಲ್ ವಿವಿಯಲ್ಲಿ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಗಳಿಸಲು ತೆರಳಿದ್ದರು.
2015ರಲ್ಲಿ ಅಮೆರಿಕಕ್ಕೆ ತೆರಳಿ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ತರಗತಿಗೆ ಸೇರಿಕೊಂಡಿದ್ದರು. ಕ್ರಿಕೆಟ್ ಅಭ್ಯಾಸವನ್ನು ನಿಲ್ಲಿಸಿದ್ದ ಸೌರಭ್ ಪದವಿ ಪಡೆದ ನಂತರ ಒರ್ಯಾಕಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.