ಕ್ರಿಕೆಟ್

ಮೊಹಮ್ಮದ್ ಕೈಫ್‌ ಅಹಂಕಾರವನ್ನು ಇಳಿಸಿದ್ದೆ ಎಂದ ಶೇನ್ ವಾರ್ನ್, ಅಸಲಿಗೆ ಆಗಿದ್ದೇನು?

Vishwanath S
ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್‌ರ ಅಹಂಕಾರವನ್ನು ಇಳಿಸಿದ್ದೆ ಎಂದು ಆಸ್ಟ್ರೇಲಿಯಾ ಮಾಜಿ ಸ್ಪಿನ್ ದಿಗ್ಗಜ ಶೇನ್ ವಾರ್ನ್ ತಮ್ಮ ನೋ ಸ್ಪಿನ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. 
ಚೊಚ್ಚಲ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿ, ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದ ಶೇನ್ ವಾರ್ನ್ ಈ ಸಂದರ್ಭದಲ್ಲಿ ನಡೆದಿದ್ದ ಘಟನೆಯೊಂದರ ಕುರಿತು ಬರೆದುಕೊಂಡಿದ್ದಾರೆ. 
ಇದೇ ವೇಳೆ ಮೊಹಮ್ಮದ್ ಕೈಫ್ ಸಹ ತಂಡದಲ್ಲಿ ಆಡುತ್ತಿದ್ದರು. ಒಂದು ದಿನ ರಾಜಸ್ತಾನ ತಂಡ ಹೋಟೆಲ್ ವೊಂದಕ್ಕೆ ಹೋದ ಸಂದರ್ಭದಲ್ಲಿ ಆಟಗಾರೆಲ್ಲರೂ ತಮ್ಮ ರೂಮ್ ಕೀ ತೆಗೆದುಕೊಂಡು ಅವರವರ ರೂಮಿಗೆ ತೆರಳಿದ್ದರು. ಆದರೆ ಕೈಫ್ ಮಾತ್ರ ರಿಸೆಪ್ಷೆನಿಸ್ಟ್ ಬಳಿ ಬಂದು ನಾನು ಕೈಫ್ ಎಂದರಂತೆ. ಅದಕ್ಕೆ ಹೋಟೆಲ್ ಸಿಬ್ಬಂದಿ ನಮ್ಮಿಂದ ಏನು ಸಹಾಯಬೇಕು ಎಂದು ಕೇಳಿದ್ದಕ್ಕೆ, ಆಗ ಕೈಫ್ ಮತ್ತೆ ನಾನು ಕೈಫ್ ಎಂದರಂತೆ, ಆಗ ಮಧ್ಯಪ್ರವೇಶಿಸಿದ ವಾರ್ನ್ ಏನಾದರೂ ಸಮಸ್ಯೆ ಇದಿಯಾ ಎಂದು ಕೈಫ್ ರನ್ನು ಕೇಳಿದ್ದಕ್ಕೆ, ಯಸ್ ಐ ಆ್ಯಮ್ ಕೈಫ್ ಎಂದು ಮತ್ತೆ ಹೇಳಿದ್ದರು. 
ಅದು ನನಗೆ ಗೊತ್ತು. ಈ ನಿಮ್ಮ ಸಮಸ್ಯೆ ಏನು ಎಂದ ಕೇಳಿದ್ದಕ್ಕೆ ನನಗೆ ಚಿಕ್ಕ ರೂಂ ನೀಡಲಾಗಿದೆ ಎಂದು ಹೇಳಿದ್ದರು. ಅದಕ್ಕೆ ವಾರ್ನ್ ನನ್ನೊಬ್ಬನಿಗೆ ಬಿಟ್ಟು ಉಳಿದವರೆಲ್ಲರಿಗೂ ಚಿಕ್ಕ ರೂಂ ನೀಡಲಾಗಿದೆ. ಕಾರಣ ನನ್ನ ರೂಂನಲ್ಲಿ ಆಗಾಗ ಸಭೆ ನಡೆಯುವುದರಿಂದ ನನಗೆ ಮಾತ್ರ ದೊಡ್ಡ ರೂಂ ನೀಡಲಾಗಿದೆ. ನೀವು ಮಾತ್ರ ನಿಮ್ಮ ಇಷ್ಟಕ್ಕೆ ಅಪ್ ಗ್ರೇಡ್ ಆಗಲು ಪ್ರಯತ್ನಿಸುತ್ತಿದ್ದೀರಾ ಎಂದು ಕೇಳಿದ ತಕ್ಷಣ ಕೈಫ್ ಅಲ್ಲಿಂದ ಕಾಲ್ಕಿತ್ತಿದ್ದರು ಎಂದು ವಾರ್ನ್ ಬರೆದುಕೊಂಡಿದ್ದಾರೆ. 
ಭಾರತೀಯ ಆಟಗಾರರು ಯಾವಾಗಲೂ ರಾಯಲ್ ಆಗಿರಲು ಬಯಸುತ್ತಾರೆ. ಕೆಲವು ಹಿರಿಯ ಆಟಗಾರರು ಕಿರಿಯ ಆಟಗಾರರಿಗೆ ತಮ್ಮ ಬ್ಯಾಗ್ ತರಲು ಕೂಡ ಹೇಳುತ್ತಿದ್ದರು. ಆದರೆ ನನ್ನ ಪ್ರಕಾರ ಮೈದಾನದಲ್ಲಿ ಎಲ್ಲರೂ ಸಮಾನಾಗಿರಬೇಕು, ಆಟದಲ್ಲಿ ಹಿರಿಯರು, ಕಿರಿಯರು, ಯಾರೇ ಆಗಲಿ ಶಿಸ್ತು ಮುಖ್ಯ ಎಂದು ಸಮಜಾಯಿಸಿ ನೀಡಿದ್ದಾರೆ.
SCROLL FOR NEXT