ವಿರಾಟ್ ಕೊಹ್ಲಿ, ಜಸ್ಪ್ರಿತ್ ಬುಮ್ರಾ 
ಕ್ರಿಕೆಟ್

ಐಸಿಸಿ ರ್ಯಾಂಕಿಂಗ್: ಕೊಹ್ಲಿ, ಬುಮ್ರಾಗೆ ಅಗ್ರ ಪಟ್ಟ, ಟೀಂ ಇಂಡಿಯಾಗೆ ದ್ವಿತೀಯ ಸ್ಥಾನ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರು ಐಸಿಸಿ ಏಕದಿನ ಪಂದ್ಯದ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದಾರೆ.

ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗದ ಬೌಲರ್  ಜಸ್ಪ್ರಿತ್ ಬುಮ್ರಾ ಅವರು ಐಸಿಸಿ ಏಕದಿನ  ಪಂದ್ಯದ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದಾರೆ.
ಮಂಗಳವಾರ ಪ್ರಕಟವಾದ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಕೊಹ್ಲಿ ಹಾಗೂ ಬುಮ್ರಾ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕೊಹ್ಲಿ 899 ಅಂಕಗಳೊಂದಿಗೆ ಅಗ್ರ [ಅಟ್ಟವನ್ನು ಅಲಂಕರಿಸಿದ್ದರೆ ಉಪ ನಾಯಕ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನು ಆರಂಭಿಕ ಆಟಗಾರ ಶಿಖರ್ ಧವನ್ ತಾವು ಈ ಹಿಂದಿಗಿಂತ ಒಂದು ಸ್ಥಾನ ಮೇಲೇರಿದ್ದು ಒಂಬತ್ತರಿಂದ ಎಂಟನೇ ರ್ಯಾಂಕ್ ಗೆ ಭಡ್ತಿ ಪಡೆದಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಪಟ್ಟಿಯಲ್ಲಿ 20ನೇ ಸ್ಥಾನ ಗಳಿಸಿದ್ದಾರೆ.
ಬೌಲರ್ ಗಳ ಪಟ್ಟಿಯಲ್ಲಿ ಬುಮ್ರಾ 841 ಅಂಕಗಳೊಡನೆ ಮೊದಲ ಸ್ಥಾನ ಪಡೆಇದ್ದರೆ ಕುಲದೀಪ್ ಯಾದವ್ ತಾವು ಮೂರನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಇನ್ನು ವೈ. ಚಹಾಲ್ ಐದನೇ, ಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ಥಾನದ ಆಟಗಾರ ರಶೀದ್ ಕಾನ್ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಆಲ್ ರೌಂಡರ್ ಗಳ ಪೈಕಿ ಅಗ್ರ ಶ್ರೇಯಾಂಕದಲ್ಲಿದ್ದಾರೆ.
ಇನ್ನು ತಂಡದ ಒಟ್ಟಾರೆ ಪ್ರದರ್ಶನವನ್ನು ಪರಿಗಣಿಸಿದರೆ ಐಸಿಸಿ ಪಟ್ಟಿಯಲ್ಲಿ ಭಾರತ 121  ಅಂಕಗಳೊಡನೆ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 126 ಅಂಕಗಳೊಡನೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!