ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಮಾಧ್ಯಮ ಮತ್ತು ಅಭಿಮಾನಿಗಳ ಜತೆ ವಿನಯದಿಂದ ವರ್ತಿಸಿ: ಕೊಹ್ಲಿಗೆ ಬಿಸಿಸಿಐ ಖಡಕ್ ಸೂಚನೆ

ಅಭಿಯಾನಿಯೊಬ್ಬರಿಗೆ ದೇಶ ಬಿಟ್ಟು ಹೋಗು ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಖಡಕ್ ಸೂಚನೆಯೊಂದನ್ನು ನೀಡಿದೆ.

ವಿರಾಟ್ ಕೊಹ್ಲಿ
Vishwanath S
Updated On : 17 Nov 2018, 4:40 am
ಮುಂಬೈ: ಅಭಿಯಾನಿಯೊಬ್ಬರಿಗೆ ದೇಶ ಬಿಟ್ಟು ಹೋಗು ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಖಡಕ್ ಸೂಚನೆಯೊಂದನ್ನು ನೀಡಿದೆ. 
ನವೆಂಬರ್ 21ರಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಆಸ್ಟ್ರೇಲಯಾ ಪ್ರವಾಸದಲ್ಲಿ ವಿನಯವಾಗಿ ವರ್ತಿಸಿ. ಟೀಂ ಇಂಡಿಯಾ ನಾಯಕನಿಗೆ ಸೂಕ್ತವಾದ ವರ್ತನೆ ತೋರಬೇಕು ಎಂದು ಬಿಸಿಸಿಐ ಸೂಚಿಸಿದೆ. 
ಸದ್ಯ ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾಕ್ಕೆ ತೆರಳಿದೆ. ಆದರೆ ಬಿಸಿಸಿಐನ ಸಿಒಎ ಸಮಿತಿ, ವಾಟ್ಸ್ ಆಪ್ ಚ್ಯಾಟ್ ಮೂಲಕ ಹಾಗೂ ನಂತರ ದೂರವಾಣಿ ಕರೆ ಮೂಲಕ ವಿರಾಟ್ ಕೊಹ್ಲಿ ಜತೆಗೆ ಸಮಿತಿಯ ಅಧಿಕಾರಿಗಳು ಮಾತುಕತೆ ನಡೆಸಿದ ವೇಳೆ ಸಲಹೆ ನೀಡಿದ್ದಾರೆ. 

Advertisement

Advertisement

ಮಾಧ್ಯಮಗಳು ಹಾಗೂ ಸಾರ್ವಜನಿಕರೊಂದಿಗೆ ಮಾತನಾಡುವ ವೇಳೆ ವಿರಾಟ್ ಕೊಹ್ಲಿ ವಿನಯತೆಯಿಂದ ಇರುವಂತೆ ಹೇಳಿದ್ದೇವೆ. ಅಲ್ಲದೆ ಅವರ ಇತ್ತೀಚಿನ ವರ್ತನೆ ಅಹಂಕಾರದಿಂದ ಕೂಡಿತ್ತು ಎಂದು ಸಿಬ್ಬಂದಿ ತಿಳಿಸಿದ್ದಾರೆ. 
ಇನ್ನು ಗುರುವಾರ ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಕೊಹ್ಲಿ ವಿನಯದಿಂದ ವರ್ತಿಸಿದ್ದು ಸಹ ಇದೇ ಕಾರಣಕ್ಕಾಗಿಯೇ ಎನ್ನಲಾಗಿದೆ. ಕಳೆದ ವಾರ ತನ್ನ ಆ್ಯಪ್ ನಲ್ಲಿ ಅಭಿಮಾನಿಗಳೊಂದಿಗೆ ಚರ್ಚೆ ನಡೆಸುವ ವೇಳೆ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬರಿಗೆ ದೇಶ ಬಿಟ್ಟು ಹೋಗು ಎಂದು ಕಿಡಿಕಾರಿದ್ದರು. 
ಕೊಹ್ಲಿಗೆ ಅಭಿಮಾನಿಯೊಬ್ಬ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗಿಂತ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ಹೆಚ್ಚು ಶ್ರಮ ಹಾಕುತ್ತಾರೆ. ಹೀಗಾಗಿ ನನಗೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ ಮನ್ ಗಳು ಎಂದರೆ ಇಷ್ಟ ಎಂದು ಹೇಳಿ ವಿರಾಟ್ ಕೊಹ್ಲಿಗೆ ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement