ಆಸೀಸ್ ವಿರುದ್ಧ ಟಿ-20, ಏಕದಿನ ಮತ್ತು ಟೆಸ್ಟ್ ಸರಣಿಯ ಸಂಪೂರ್ಣ ವೇಳಾಪಟ್ಟಿ
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಸುದೀರ್ಘ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಿದ್ಧವಾಗಿದ್ದು, ಭಾರತ - ಆಸೀಸ್ ನಡುವೆ ...
ಬ್ರಿಸ್ಬೇನ್: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಸುದೀರ್ಘ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಿದ್ಧವಾಗಿದ್ದು, ಭಾರತ - ಆಸೀಸ್ ನಡುವೆ ಮೂರು ಪಂದ್ಯಗಳ ಟಿ20 ಸರಣಿ, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ನವೆಂಬರ್ 21ರಂದು ಬ್ರಿಸ್ಬೇನ್ ನಲ್ಲಿ ಟಿ20 ಸರಣಿ ಆರಂಭಗೊಳ್ಳಲಿದೆ. ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಉಳಿದೆರಡು ಪಂದ್ಯಗಳು ನಡೆಯಲಿವೆ.
ನವೆಂಬರ್ 29ಕ್ಕೆ ಟೀಮ್ ಇಂಡಿಯಾ ಸಿಡ್ನಿಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ 3 ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಡಿಸೆಂಬರ್ 6ಕ್ಕೆ ಆರಂಭಗೊಳ್ಳುವ ಟೆಸ್ಟ್ ಸರಣಿ ಜನವರಿ 7ಕ್ಕೆ ಮುಕ್ತಾಯಗೊಳ್ಳಲಿದೆ. ಜನವರಿ 12ರಿಂದ 3 ಪಂದ್ಯಗಳುಳ್ಳ ಏಕದಿನ ಸರಣಿ ಆರಂಭಗೊಳ್ಳಲಿದೆ.
ಪಂದ್ಯಗಳ ವಿವರ (ಟಿ-20)
ಮೊದಲ ಪಂದ್ಯ - ನವೆಂಬರ್ 21
ಸ್ಥಳ: ಬ್ರಿಸ್ಬೇನ್
ಎರಡನೇ ಪಂದ್ಯ - ನವೆಂಬರ್ 23
ಸ್ಥಳ: ಮೆಲ್ಬೋರ್ನ್
ಮೂರನೇ ಪಂದ್ಯ - ನವೆಂಬರ್ 25
ಸ್ಥಳ: ಸಿಡ್ನಿ
ಕ್ರಿಕೆಟ್ ಆಸ್ಟ್ರೇಲಿಯಾ XI Vs ಟೀಮ್ ಇಂಡಿಯಾ
ನವೆಂಬರ್ 29 ರಿಂದ ಡಿಸೆಂಬರ್ 1 (3 ದಿನ)
ಸ್ಥಳ: ಸಿಡ್ನಿ
4 ಪಂದ್ಯಗಳ ಟೆಸ್ಟ್ ಸರಣಿ
ಮೊದಲ ಟೆಸ್ಟ್ ಪಂದ್ಯ - ಡಿಸೆಂಬರ್ 6 - ಡಿಸೆಂಬರ್ 10
ಸ್ಥಳ: ಅಡಿಲೆಡ್
ಎರಡನೇ ಟೆಸ್ಟ್ ಪಂದ್ಯ - ಡಿಸೆಂಬರ್ 14 - ಡಿಸೆಂಬರ್ 18
ಸ್ಥಳ: ಪರ್ತ್
ಮೂರನೇ ಟೆಸ್ಟ್ ಪಂದ್ಯ - ಡಿಸೆಂಬರ್ 26 - ಡಿಸೆಂಬರ್ 30
ಸ್ಥಳ: ಮೆಲ್ಬೋರ್ನ್
ನಾಲ್ಕನೇ ಪಂದ್ಯ - ಜನವರಿ 3 - ಜನವರಿ 7
ಸ್ಥಳ: ಸಿಡ್ನಿ
ಏಕದಿನ ಪಂದ್ಯಗಳ ಸರಣಿ
ಮೊದಲ ಪಂದ್ಯ - ಜನವರಿ 12
ಸ್ಥಳ: ಸಿಡ್ನಿ
2ನೇ ಪಂದ್ಯ - ಜನವರಿ 15
ಸ್ಥಳ: ಅಡಿಲೆಡ್
3ನೇ ಪಂದ್ಯ - ಜನವರಿ 18
ಸ್ಥಳ: ಮೆಲ್ಬೋರ್ನ್