ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಿಇಒ ರಾಹುಲ್ ಜೊಹ್ರಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದ್ದು, ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ.
ಜೊಹ್ರಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿದ ಮೂವರು ಸದಸ್ಯರ ಆಡಳಿತಗಾರರ ಸಮಿತಿಯು, ಬಿಸಿಸಿಐ ಸಿಇಒಗೆ ಕ್ಲೀನ್ ಚಿಟ್ ನೀಡಿ, ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ ಎಂದು ಹೇಳಿದೆ.
ಜೊಹ್ರಿ ವಿರುದ್ಧ ಇಬ್ಬರು ಮಹಿಳೆಯರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪಗಳು ಕೇವಲ ಸೃಷ್ಟಿಸಲ್ಪಟ್ಟದೆಂದು ತನಿಖಾ ಮಂಡಳಿ ಸ್ಪಷ್ಟಪಡಿಸಿದೆ. ಅಲ್ಲದೆ ತನಿಖಾ ಮಂಡಳಿಯ ಓರ್ವ ಸದಸ್ಯರು ಜೊಹ್ರಿಗೆ ಗೆ ಲಿಂಗ ಸೂಕ್ಷ್ಮತೆಯ ಆಪ್ತ ಸಮಾಲೋಚನೆಯನ್ನು ಶಿಫಾರಸು ಮಾಡಿದ್ದಾರೆ.
ಜೊಹ್ರಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದುರ್ನಡತೆಯ ಆರೋಪ ಕೇಳಿ ಬಂದ ತಕ್ಷಣ ಅವರಿಗೆ ಬಲವಂತದ ಮೂರು ವಾರಗಳ ರಜೆಯ ಮೇಲೆ ಕಳುಹಿಸಲಾಗಿತ್ತು.