2ನೇ ಟಿ20: ಮಳೆ ಕಾರಣ ಪಂದ್ಯ ರದ್ದು
ಬ್ರಿಸ್ಟೈನ್(ಆಸ್ಟ್ರೇಲಿಯಾ) ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯ ಮಳೆಯ ಕಾರಣ ರದ್ದಾಗಿದೆ. ಈ ಮೂಲಕ ಟೀಂ ಇಂಡಿಯಾದ ಸತತ ಎಂಟನೇ ಸರಣಿ ಗೆಲುವಿನ ಆಸೆಗೆ ತಣ್ಣೀರೆರಚಿದಂತಾಗಿದೆ.
ಮಳೆಯ ಕಾರಣ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಫಲಿತಾಂಶ ರಹಿತ ಡ್ರಾ ಎಂದು ಘೋಷಣೆಯಾಗಿದ್ದು ಎರಡೂ ತಂಡಗಳು ಸಮಾನ ಅಂಕವನ್ನು ಹಂಚಿಕೊಂಡಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಮುನ್ನ ಭಾರತ ಒಟ್ಟು ಏಳು ಬಾರಿ ಟಿ20 ಸರಣಿಯನ್ನು ಗೆದ್ದುಜ್ಕೊಂಡಿತ್ತು. ಆದರೆ ಈ ಪಂದ್ಯ ಗೆಲ್ಲುವ ಮೂಲಕ ತನ್ನ ಗೆಲುವಿನ ನಾಗಾಲೋಟ ಮುಂದುವರಿಸುವ ಆಸೆ ಮಾತ್ರ ಕೈಗೂಡಲಿಒಲ್ಲ.
ಇನ್ನು ಇದಕ್ಕೆ ಮುನ್ನ ಗಬ್ಬಾದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಸಹ ಮಳೆಯ ಕಾರಣ ಡಕ್ವರ್ತ್ ಲೂವಿಸ್ ನಿಮಮ ಅಳವಡಿಸಲಾಗಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ 4 ರನ್ ಅಂತರದಲ್ಲಿ ಸೋಲು ಕಂಡಿತ್ತು. ಇದೀಗ ಇನ್ನೊಂದು ಪಂದ್ಯ ಸಹ ಮಳೆಗೆ ಬಲಿಯಾಗಿದ್ದು ಫಲಿತಾಂಶವಿಲ್ಲದೆ ಡ್ರಾ ಕಂಡಿದೆ. ಇದರೊಡನೆ ಭಾರತಕ್ಕೆ ಸರಣಿ ಗೆಲುವಿನ ಅವಕಾಶ ತಪ್ಪಿದೆ. ಅತ್ತ ಅಸೀಸ್ ಪಡೆ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸರಣಿಯ ಮುಂದಿನ ಪಂದ್ಯ ಭಾನುವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 132/7 (19 ಓವರ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics