ದುಬೈ: ಬ್ರಿಸ್ಬೆನ್ ನಲ್ಲಿ ಬುಧವಾರ ನಡೆದ ಭಾರತ ವಿರುದ್ಧ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ಆಸ್ಟ್ರೇಲಿಯಾ ತಂಡಕ್ಕೆ ದಂಡ ವಿಧಿಸಲಾಗಿದೆ.
ಸಮಯದ ವಿನಾಯಿತಿಯ ನಂತರವೂ ಆರನ್ ಫಿಂಚ್ ತಂಡವೂ ಒಂದು ಓವರ್ ಗಳಷ್ಟು ಹಿಂದುಳಿದಿದ್ದರಿಂದ ಮ್ಯಾಚ್ ರೆಫ್ರಿ ಜೆಪ್ ಕ್ರೊವಿ ಅವರು ಆಸ್ಟ್ರೇಲಿಯಾ ತಂಡದ ಮೇಲೆ ದಂಡ ವಿಧಿಸಿದ್ದಾರೆ.
ಬುಧವಾರ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು, ಮೆಲ್ಬೂರ್ನ್ ನಲ್ಲಿ ನಿನ್ನೆ ನಡೆದ ಪಂದ್ಯ ಮಳೆಯ ಕಾರಣ ರದ್ದುಗೊಂಡಿತ್ತು.