2ನೇ ಟಿ20: ಮಳೆ ನಡುವೆ ಮೈದಾನದಲ್ಲೇ ಅಂಪೈರ್‌ಗಳ ವಿರುದ್ಧ ವಿರಾಟ್ ಕೊಹ್ಲಿ ಕೋಪಗೊಂಡಿದ್ದೇಕೆ?
ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಳೆಯ ನಡುವೆ ಮೈದಾನದಲ್ಲೇ ಅಂಪೈರ್ ಗಳ ವಿರುದ್ಧ ಕೋಪಗೊಂಡಿದ್ದರು...
ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಳೆಯ ನಡುವೆ ಮೈದಾನದಲ್ಲೇ ಅಂಪೈರ್ ಗಳ ವಿರುದ್ಧ ಕೋಪಗೊಂಡಿದ್ದರು.
ಎರಡನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಪರಿಣಾಮ ಪಂದ್ಯ ಡ್ರಾ ಫಲಿತಾಂಶ ಕಂಡಿತ್ತು. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು.
ಜಸ್ ಪ್ರೀತ್ ಬುಮ್ರಾ ಪಂದ್ಯದ 19ನೇ ಓವರ್ ಎಸೆಯುವ ವೇಳೆ ಮಳೆ ಸುರಿಯಲಾರಂಭಿಸಿತ್ತು. ಈ ಸಂದರ್ಭದಲ್ಲಿ ಚೆಂಡು ಒದ್ದೆಯಾಗಿದ್ದರಿಂದ ಬೌಲರ್ ಗಳಿಗೆ ಬೌಲಿಂಗ್ ಮಾಡಲು ಕಷ್ಟವೆನಿಸಿತ್ತು.
ಇದನ್ನು ಅರಿತ ಕೊಹ್ಲಿ ಕೂಡಲೇ ಅಂಪೈರ್ ಬಳಿ ತೆರಳಿ ಪಂದ್ಯವನ್ನು ಸ್ಥಗಿತ ಮಾಡುವಂತೆ ಮನವಿ ಮಾಡಿದರು. ಆದರೆ ಕೊಹ್ಲಿ ಮನವಿಯನ್ನು ಫೀಲ್ಡ್ ಅಂಪೈರ್ ಗಳು ಪುರಸ್ಕರಿಸಲಿಲ್ಲ. ಎಲ್ಲದೆ ಪಂದ್ಯವನ್ನು ಮುಂದುವರಿಸುವಂತೆ ತಿಳಿಸಿದರು.
ಮಳೆಯಿಂದಾಗಿ ಆಸ್ಟ್ರೇಲಿಯಾ 19 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತ್ತು. ಎಡಬಿಡದೆ ಮಳೆ ಸುರಿದಿದ್ದರಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.