ದಿನೇಶ್ ಕಾರ್ತಿಕ್-ವಿಜಯ್ ಸೇತುಪತಿ
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಖ್ಯಾತ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ತಮಿಳು ನಟ ವಿಜಯ್ ಸೇತುಪತಿಗೆ ವಿಶೇಷ ಸಂದೇಶವೊಂದನ್ನು ರವಾನಿಸಿದ್ದಾರೆ.
ತಮಿಳಿನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ 96 ಚಿತ್ರವನ್ನು ವೀಕ್ಷಿಸಿದ ದಿನೇಶ್ ಕಾರ್ತಿಕ್ ಅವರು ಚಿತ್ರದ ಕುರಿತಂತೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಚಿತ್ರದಲ್ಲಿನ ವಿಜಯ್ ಸೇತುಪತಿ ನಟನೆಗೆ ಫಿದಾ ಆಗಿರುವ ದಿನೇಶ್ ಈ ಕುರಿತು ಟ್ವೀಟ್ ಮಾಡಿದ್ದಾರೆ.
ದಿನೇಶ್ ಕಾರ್ತಿಕ್ ತಮ್ಮ ಟ್ವೀಟ್ ನಲ್ಲಿ 96 ಒಂದು ಸುಂದರ ಚಿತ್ರ. ಚಿತ್ರ ನೋಡಿ ನಾನು ಭಾವುಕನಾದೆ. ಚಿತ್ರದಲ್ಲಿನ ಕಾದಲೇ.. ಕಾದಲೇ... ಹಾಡು ತುಂಬಾ ಚೆನ್ನಾಗಿದೆ. ಚಿತ್ರದ ಪ್ರತಿಯೊಂದು ದೃಶ್ಯ ನನಗೆ ಮನಸ್ಸಿಗೆ ಮುಟ್ಟಿತು ಎಂದು ಬರೆದುಕೊಂಡಿದ್ದಾರೆ.
ವಿಜಯ್ ಸೇತುಪತಿ ಅವರ ದೊಡ್ಡ ಅಭಿಮಾನಿ ನಾನು. ಅವರ ಅಭಿನಯದ 96 ಚಿತ್ರ ಅದ್ಭುತವಾಗಿದೆ. ಗೋವಿಂದಾ ವಸಂತಾ ಮತ್ತು ಕಾತಾಲೆ ಹಾಡುಗಳು ಮನಮುಟ್ಟುವಂತಿದೆ ಎಂದು ಟ್ವೀಟಿಸಿದ್ದಾರೆ.