ರಾಜ್ ಕೋಟ್: ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಚೊಚ್ಚಲ ಶತಕ ದಾಖಲಿಸಿರುವ ಪೃಥ್ವಿ ಶಾ ತಮ್ಮ ಕ್ರಿಕೆಟ್ ಜೀವನದ ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ನ ಅಂತಿಮ 2 ಪಂದ್ಯಗಳಲ್ಲಿ ಪೃಥ್ವಿ ಶಾ ಆಯ್ಕೆಗೊಂಡಿದ್ದರು. ಆದರೆ ಕ್ರೀಸ್ ಗಿಳಿಯಲು ಶಾಗೆ ಅವಕಾಶ ಸಿಕ್ಕಿರಲಿಲ್ಲ. "ನಾನು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲು ಸಜ್ಜುಗೊಂಡಿದ್ದೆ. ಆದರೆ ನನಗೆ ಕ್ರೀಸ್ ಗಿಳಿಯುವುದಕ್ಕೆ ಇಲ್ಲಿ ಅವಕಾಶ ಸಿಕ್ಕಿತು" ಎಂದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯ ನನಗೆ ಅದ್ಭುತ ಅನುಭವ ನೀಡಿತ್ತು. ತಂಡದಲ್ಲಿ ಸೀನಿಯರ್ ಜೂನಿಯರ್ ಎಂಬುದೆಲ್ಲಾ ಇಲ್ಲ ಎಂದು ವಿರಾಟ್ ಭಾಯ್ ಹೇಳಿದ್ದರು, ಹಿರಿಯ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವುದು, ಅವರ ಸ್ನೇಹ ಸಿಕ್ಕಿರುವುದು ನನಗೆ ಸಂತಸ ತಂದಿದೆ ಎಂದು ಪೃಥ್ವಿ ಶಾ ಹೇಳಿದ್ದಾರೆ.
ಇದೇ ವೇಳೆ ತಮ್ಮ ಚೊಚ್ಚಲ ಶತಕವನ್ನು ತಂದೆಗೆ ಅರ್ಪಿಸಿರುವ ಪೃಥ್ವಿ ಶಾ, ತಮ್ಮ ತಂದೆ ತಮಗಾಗಿ ಮಾಡಿರುವ ತ್ಯಾಗವನ್ನು ಸ್ಮರಿಸಿದ್ದಾರೆ.
4 ವರ್ಷದವನಿದ್ದಾಗ ತಾಯಿಯನ್ನು ಕಳೆದುಕೊಂಡೆ. ಆಗಿನಿಂದ ತಂದೆಯೇ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ನನಗಾಗಿ ಅವರು ಸಾಕಷ್ಟು ತ್ಯಾಗ ಮಾಡಿದ್ದಾರೆ, ಅದನ್ನು ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ, ನಾನು ಇಂದು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ದಾಖಲಿಸಿದರೆ ಅದಕ್ಕೆ ನನ್ನ ತಂದೆಯೇ ಕಾರಣ ಕ್ರಿಕೆಟ್ ಬಗ್ಗೆ ಅವರಿಗೆ ಹೆಚ್ಚು ಗೊತ್ತಿಲ್ಲ, ಆದರೆ ನಿನ್ನ ಮೊದಲ ಪಂದ್ಯವನ್ನು ಚೆನ್ನಾಗಿ ಆಡು ಎಂದಿದ್ದರು ಎಂಬುದನ್ನು ಪೃಥ್ವಿ ಶಾ ಸ್ಮರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics