ವಿರಾಟ್ ಕೊಹ್ಲಿ 
ಕ್ರಿಕೆಟ್

ಹೈದರಾಬಾದ್ ಟೆಸ್ಟ್ : ಮೊದಲ ಇನ್ನಿಂಗ್ಸ್ ನಲ್ಲಿ ಭಾರತಕ್ಕೆ 56 ರನ್ ಗಳ ಮುನ್ನಡೆ

ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ 56 ರನ್ ಗಳೊಂದಿಗೆ ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಹೈದರಾಬಾದ್ : ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ 56 ರನ್ ಗಳೊಂದಿಗೆ ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ನಿನ್ನೆದಿನ 4 ವಿಕೆಟ್ ನಷ್ಟಕ್ಕೆ 308 ಗಳಿಸಿದ ಟೀಂ ಇಂಡಿಯಾ ಇಂದು ಉಳಿದ ವಿಕೆಟ್ ಗಳನ್ನು ಕಳೆದುಕೊಂಡು 59 ರನ್ ಗಳಿಸುವ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿ ಒಟ್ಟಾರೇ 367 ರನ್ ಪಡೆದುಕೊಂಡಿತು.

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಹಾಗೂ ಅಜಿಂಕ್ಯಾ ರಹಾನೆ ಅವರ ಮುರಿಯದ ಜೊತೆಯಾಟದಿಂದ 146 ರನ್   ಹರಿದುಬಂದಿತ್ತು. ರಿಷಬ್ ಪಂತ್ 92 ಹಾಗೂ ರಹಾನೆ 80 ರನ್ ಗಳಿಸಿ ಫೆವಿಲಿಯನ್ ಗೆ ನಿರ್ಗಮಿಸಿದರು.

ಕಳೆದ ಪಂದ್ಯದಲ್ಲಿ ಕೆರಿಬಿಯನ್ನರ ವಿರುದ್ಧ  ಚೊಚ್ಚಲ ಶತಕ ದಾಖಲಿಸಿದ್ದ ಅಲ್ ರೌಂಡರ್  ರವೀಂದ್ರ  ಜಡೇಜಾ, ಈ ಪಂದ್ಯದಲ್ಲಿ ಡೆಕ್ ಜೌಟ್ ಆಗುವ ಮೂಲಕ  ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದ್ದರು.  ಸ್ಪಿನ್ನರ್ ಆರ್. ಅಶ್ವಿನ್ 35 ರನ್ ಗಳಿಸುವ ಮೂಲಕ ಟೀಂ ಇಂಡಿಯಾ 350ರ ಗಡಿ ದಾಟಲು  ನೆರವಾಯಿತು.

ವೆಸ್ಟ್ ಇಂಡೀಸ್ ಪರ ಹೌಲ್  ಐದು ಹಾಗೂ ವೇಗಿ ಶಾನನ್ ಗ್ಯಾಬ್ರೀಲ್  ಮೂರು ವಿಕೆಟ್ ಗಳನ್ನು ಪಡೆದುಕೊಂಡರು.

ವೆಸ್ಟ್ ಇಂಡೀಸ್ ವಿರುದ್ಧದ  ಸರಣಿಯಲ್ಲಿ ಭಾರತ ಪ್ರಸ್ತುತ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಒಂದು ವೇಳೆ ಈ ಪಂದ್ಯವನ್ನು ಗೆದ್ದರೆ,  2013 ರಿಂದ  ಸ್ವದೇಶದಲ್ಲಿ ಸತತ 10 ಸರಣಿ ಗೆದ್ದ ಖ್ಯಾತಿ ಪಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಚಿನ್ನಸ್ವಾಮಿ ಮೈದಾನದಲ್ಲಿ CSK ಮಣಿಸಿದ RCB, ಚೆನ್ನೈಗೆ ಸತತ 3ನೇ ಸೋಲು!

ಗುಜರಾತ್ ಜನರು ಅನಕ್ಷರಸ್ಥರು..; ಮೋದಿ, ಪಿಣರಾಯಿ ವಿಜಯನ್ ಜನರ ದಾರಿ ತಪ್ಪಿಸಿದ್ದಾರೆ: Mallikarjun Kharge

ಟ್ರಂಪ್ 48 ಗಂಟೆಗಳ ಗಡುವು ಬೆನ್ನಲ್ಲೇ ಇರಾನ್‌ನ ಮತ್ತೊಬ್ಬ IRGC ಹಿರಿಯ ಕಮಾಂಡರ್ ಹತ್ಯೆಗೈದ ಇಸ್ರೇಲ್!

Operation Eagle Claw ವೈಫಲ್ಯ, ಮಣ್ಣು ಮುಕ್ಕಿದ್ದು ಮರೆತುಬಿಟ್ರಾ? 'ಈ ಸಂದೇಶ' ನೆನಪಿಡಿ: US Crazy Bast*rds ಪೋಸ್ಟ್ ಗೆ ಇರಾನ್ ವ್ಯಂಗ್ಯ!

IPL 2026: ಚಿನ್ನಸ್ವಾಮಿಯಲ್ಲಿ ಸಿಕ್ಸರ್​ಗಳ ಸುರಿಮಳೆ; CSK ವಿರುದ್ಧ ದಾಖಲೆಯ 250 ರನ್ ಪೇರಿಸಿದ RCB

SCROLL FOR NEXT