ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಕ್ವಾರ್ಟರ್ ಫೈನಲ್ಸ್ ನಲ್ಲಿ ಕ್ರೀಸ್ ನಲ್ಲಿದ್ದ ರೋಹಿತ್ ಶರ್ಮಾ ಅವರನ್ನು ಅಭಿಮನಿಯೊಬ್ಬ ಅಪ್ಪಿ ಮುತ್ತುಕೊಡಲು ಯತ್ನಿಸಿದ್ದಾನೆ.
ಬಿಹಾರ-ಮುಂಬೈ ನಡುವೆ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯ ನಡೆಯುತ್ತಿದ್ದು, ಅಭಿಮಾನಿಯೊಬ್ಬ ಕ್ರೀಸ್ ನತ್ತ ಧಾವಿಸಿ ಬಂದು ರೋಹಿತ್ ಶರ್ಮಾ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾನೆ, ಅಷ್ಟೇ ಅಲ್ಲದೇ ರೋಹಿತ್ ಗೆ ಮುತ್ತು ಕೊಡಲು ಯತ್ನಿಸಿದ್ದಾನೆ. ಈ ಘಟನೆಯಿಂದ ರೋಹಿತ್ ಶರ್ಮಾ ಕೆಲಕಾಲ ಗೊಂದಲಕ್ಕೀಡಾಗಿದ್ದರು.
ಈ ಘಟನೆಯನ್ನು ರೋಹಿತ್ ಪತ್ನಿ ರಿತಿಕಾ ಸಹ ಗಮನಿಸಿದ್ದು, ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಿದ್ದಾರೆ. "ಕ್ರೀಸ್ ನತ್ತ ತೆರಳಿ ರೋಹಿತ್ ಗೆ ಕಿಸ್ ಮಾಡಿದ ವ್ಯಕ್ತಿ ನನಗೆ ಪ್ರಬಲ ಪೈಪೋಟಿ ನೀಡುವ ವ್ಯಕ್ತಿ ಎಂದು ಹೇಳಿದ್ದಾರೆ.
ಇನ್ನು ಯಜುವೇಂದ್ರ ಚಹಾಲ್ ಕೂಡ ತಮಾಷೆಯ ಪ್ರತಿಕ್ರಿಯೆ ನೀಡಿದ್ದು, ಅಕ್ಕಾ.. ಏನಾಗ್ತಿದೆ... ಏನಾಗ್ತಿದೆ ಇಲ್ಲಿ ಅಂತ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics