ಉಮೇಶ್​ ಯಾದವ್ 
ಕ್ರಿಕೆಟ್

ವೆಸ್ಟ್ಇಂಡೀಸ್ ವಿರುದ್ಧ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ: ಶಾರ್ದೂಲ್ ಬದಲು ಉಮೇಶ್ ಯಾದವ್ ಗೆ ಸ್ಥಾನ

ವೆಸ್ಟ್ಇಂಡೀಸ್ ವಿರುದ್ಧದ ಎರಡು ಏಕದಿನ ಪಂದ್ಯಗಳಿಗಾಗಿ ಭಾರತ ತಂಡ ಪ್ರಕಟವಾಗಿದ್ದು ಶಾರ್ದೂಲ್​ ಠಾಕೂರ್ ಬದಲು ವೇಗದ ಬೌಲರ್​ ಉಮೇಶ್​ ಯಾದವ್ ಸ್ಥಾನ ಗಿಟ್ಟಿಸಿದ್ದಾರೆ.

ನವದೆಹಲಿ: ವೆಸ್ಟ್ಇಂಡೀಸ್ ವಿರುದ್ಧದ  ಎರಡು ಏಕದಿನ ಪಂದ್ಯಗಳಿಗಾಗಿ ಭಾರತ ತಂಡ ಪ್ರಕಟವಾಗಿದ್ದು  ಶಾರ್ದೂಲ್​ ಠಾಕೂರ್ ಬದಲು ವೇಗದ ಬೌಲರ್​ ಉಮೇಶ್​ ಯಾದವ್ ಸ್ಥಾನ ಗಿಟ್ಟಿಸಿದ್ದಾರೆ.
ಠಾಕೂರ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಎರಡು ಏಕದಿನ ಪಂದ್ಯಗಳಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಬದಲಿಗೆ ಉಮೇಶ್ ಯಾದವ್ ಗೆ ಸ್ಥಾನ ನೀಡಲು  ಆಲ್​ ಇಂಡಿಯಾ ಸೀನಿಯರ್​ ಆಯ್ಕೆ ಸಮಿತಿ ನಿರ್ಧಿರಿಸಿದೆ.
ಇತ್ತೀಚೆಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ವೇಗಿ ಉಮೇಶ್ ಯಾದವ್ ಹತ್ತು ವಿಕೆಟ್ ಪಡೆದು ಸರಣಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು.
ಕಪಿಲ್ ದೇವ್ ಮತ್ತು ಜಾವಗಲ್ ಶ್ರೀನಾಥ್ ನಂತರದ ಮೂರನೇ ವೇಗದ ಬೌಲರ್ ಯಾದವ್ ಅಆಗಿದ್ದಾರೆ.
ಇನ್ನು ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ  ತಂಡದ ನಾಯಕತ್ವ ವಹಿಸಲಿದ್ದು  ರಿಶಬ್ ಪಂತ್ ಇದೇ ಮೊದಲ ಬಾರಿಗೆ ಏಕದಿನ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.
ಭಾರತ ಮತ್ತು ವೆಸ್ಟ್ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಭಾನುವಾರ, ಅಕ್ಟೋಬರ್ 21 ರಂದು ಗೌಹಾಟಿಯಲ್ಲಿ ನಡೆಯಲಿದೆ.ಎರಡನೇ ಪಂದ್ಯ ಅಕ್ಟೋಬರ್ 24 ರಂದು ವಿಶಾಖಪಟ್ಟಣಂನಲ್ಲಿ ಇರಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಹೀಗಿದೆ-
ವಿರಾಟ್​ ಕೊಹ್ಲಿ(ನಾಯಕ), ರೋಹಿತ್​ ಶರ್ಮಾ, ​, ಅಂಬಟಿ ರಾಯುಡು, ಮನೀಶ್ ಪಾಂಡೆ, ಎಂ.ಎಸ್​. ಧೋನಿ(ವಿಕೆಟ್​ ಕೀಪರ್​), ಶಿಖರ್​ ಧವನ್​, ಕೆ.ಎಲ್​.ರಾಹುಲ್, ರಿಶಬ್​ ಪಂಟ್​, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್​, ಕುಲದೀಪ್​ ಯಾದವ್​, ಮಹಮ್ಮದ್​ ಶಮಿ, ಖಲೀಲ್​ ಅಹ್ಮದ್​, ಉಮೇಶ್​ ಯಾದವ್​.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ