ಕ್ರಿಕೆಟ್

ಇಂಗ್ಲೆಂಡ್ ತಂಡದ ಅಭ್ಯಾಸದ ವೇಳೆ ನಾಗರಹಾವು ಬೆಚ್ಚಿ ಬಿದ್ದ ಆಟಗಾರರು!

Vishwanath S
ಕೊಲಂಬೊ: ಶ್ರೀಲಂಕಾ ವಿರುದ್ಧ ಮೂರನೇ ಏಕದಿನ ಪಂದ್ಯಕ್ಕಾಗಿ ಪ್ರವಾಸಿ ಇಂಗ್ಲೆಂಡ್ ತಂಡದ ಆಟಗಾರರ ಪೂರ್ವಭಾವಿ ಅಭ್ಯಾಸದಲ್ಲಿ ನಿರತರಾಗಿದ್ದ ವೇಳೆಯಲ್ಲಿ ಮೈದಾನದಲ್ಲಿ ನಾಗರಹಾವೊಂದು ಕಾಣಿಸಿಕೊಂಡು ಘಟನೆ ಸೋಮವಾರ ನಡೆದಿದೆ. 
ಇಂಗ್ಲೆಂಡ್ ತಂಡದ ಸ್ಪಿನ್ನರ್ ಮೊಹಿಲ್ ಅಲಿ, ಆದಿಲ್ ರಶೀದ್ ಮತ್ತು ಡಾಸನ್ ಅಭ್ಯಾಸ ನಡೆಸುತ್ತಿದ್ದ ಜಾಗದಲ್ಲಿ ಹಾವು ಪ್ರತ್ಯಕ್ಷವಾಗಿದೆ. ಆ ಬಳಿಕ ಮೈದಾನದ ಸಿಬ್ಬಂದಿ ಹಾವು ಹಿಡಿದು ಹೊರಬಿಟ್ಟಿದ್ದಾರೆ. 
ಹಾವಿನ ಫೋಟೋವನ್ನು ಇಂಗ್ಲೆಂಡ್ ಕ್ರಿಕೆಟ್ ನ ತನ್ನ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.
SCROLL FOR NEXT