ಕ್ರಿಕೆಟ್

ನೆಲಕ್ಕೆ ತಾಗಿದ್ದರು ಕ್ಯಾಚ್ ಹಿಡಿದಂತೆ ಸಂಭ್ರಮಿಸಿದ ರೋಹಿತ್, ಮ್ಯಾಚ್ ಫಿಕ್ಸ್ ಆಗಿದ್ದಾರಾ ಅಂಪೈರ್ಸ್?

Vishwanath S
2018ರ ಏಷ್ಯಾ ಕಪ್ ಚಾಂಪಿಯನ್ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಸದ್ಯ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡುತ್ತಿದ್ದು ಅವರು ಹಿಡಿದ ಕ್ಯಾಚ್ ಒಂದು ಇದೀಗ ವಿವಾದಕ್ಕೆ ಕಾರಣವಾಗಿದೆ. 
ಹೈದರಾಬಾದ್-ಮುಂಬೈ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮೊದಲ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಹೈದರಾಬಾದ್ ತಂಡದ ಬ್ಯಾಟ್ಸ್ ಮನ್ ಬವನಕ ಸಂದೀಪ್ ಬ್ಯಾಟ್ ಗೆ ಚೆಂಡು ತಗುಲಿ ಸ್ಲಿಪ್ ನಲ್ಲಿದ್ದ ರೋಹಿತ್ ಕೈ ಸೇರಿತ್ತು. ಆದರೆ ಚೆಂಡು ರೋಹಿತ್ ಕೈ ಸೇರುವ ಮೊದಲು ನೆಲಕ್ಕೆ ತಾಗಿದಂತೆ ಕಾಣಿಸಿತ್ತು. 
ಇದರಿಂದ ಮೈದಾನದ ಅಂಪೈರ್ ಗೆ ಸರಿಯಾಗಿ ತಿಳಿಯದ ಕಾರಣ ಮೂರನೇ ಅಂಪೈರ್ ಗೆ ಮನವಿ ಮಾಡಿದರು. ಮೂರನೇ ಅಂಪೈರ್ ಸಹ ದೃಶ್ಯಗಳನ್ನು ಮರುಪರಿಶೀಲಿಸಿದರು. ಆದರೆ ಚೆಂಡು ನೆಲಕ್ಕೆ ತಾಗಿದ್ದನ್ನು ಪತ್ತೆ ಹಚ್ಚುವಲ್ಲಿ ಮೂರನೇ ಅಂಪೈರ್ ಸಹ ವಿಫಲರಾಗಿ ಔಟ್ ತೀರ್ಪು ನೀಡಿದರು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ವಿವಾದಾತ್ಮಕ ಕ್ಯಾಚ್ ಕುರಿತಂತೆ ಚರ್ಚೆಗಳಾಗುತ್ತಿವೆ.
ಸರಿಯಾಗಿ ಗಮನಿಸದೆ ಔಟ್ ನೀಡಿರುವ ಅಂಪೈರ್ ಗಳ ಈ ನಡೆ ಇದೀಗ ಅವರು ಫಿಕ್ಸ್ ಆಗಿದ್ದಾರೆ ಎಂಬ ಅನುಮಾನಗಳು ಮೂಡಿಸುತ್ತಿವೆ. 
SCROLL FOR NEXT