ಕ್ರಿಕೆಟ್

ಪಾಕ್‌ನ ಅಜರ್ ಫನ್ನಿ ರನೌಟ್ ಬಳಿಕ ಮತ್ತೊಂದು ಫನ್ನಿ ರನೌಟ್, ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

Vishwanath S
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟ್ಸ್ ಮನ್ ಅಜರ್ ಅಲಿ ವಿಚಿತ್ರ ರೀತಿಯಲ್ಲಿ ರನ್ ಔಟ್ ಆಗಿ ನಗೆಪಾಟಲಿಗೀಡಾಗಿದ್ದು ಇದೀಗ ಅದೇ ರೀತಿ ಮತ್ತೊಂದು ರನೌಟ್ ದಾಖಲಾಗಿದೆ. 
ನ್ಯೂಜಿಲೆಂಡ್ ನ ಸ್ಥಳೀಯ ಪಂದ್ಯವೊಂದರಲ್ಲಿ ಫನ್ನಿ ರನೌಟ್ ಒಂದು ದಾಖಲಾಗಿದೆ. ಸಹ ಆಟಗಾರನನ್ನು ಗಮನಿಸದೆ ತನ್ನ ಪಾಡಿಗೆ ತಾನು ಓಡುತ್ತಿದ್ದ ಆಟಗಾರ ಕೊನೆಗೆ ಸಹ ಆಟಗಾರ ನಾನ್ ಸ್ಟ್ರೈಕ್ ನಲ್ಲಿ ಬಿದ್ದಿರುವುದನ್ನು ಕಂಡಿದ್ದಾನೆ. ಈ ವೇಳೆ ಆತ ಸಹ ಕಾಲು ಜಾರಿ ಬಿದ್ದಿದ್ದು ಅಷ್ಟರಲ್ಲೇ ಫೀಲ್ಡರ್ ಚೆಂಡನ್ನು ವಿಕೆಟ್ ಕೀಪರ್ ಕೈಗೆ ಎಸೆದಿದ್ದು ಕೀಪರ್ ರನೌಟ್ ಮಾಡಿದ್ದಾರೆ. 
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕ್ ಆಟಗಾರ ಅಜರ್ ಅಲಿ ವಿಚಿತ್ರ ರನೌಟ್ ಬಳಿಕ ನ್ಯೂಜಿಲೆಂಡ್ ಆಟಗಾರ ಸಹ ಫನ್ನಿಯಾಗಿ ರನೌಟ್ ಆಗಿದ್ದಾರೆ.
SCROLL FOR NEXT