ವಿಜಯ್ ಹಜಾರೆ ಟ್ರೋಫಿ: ಮೂರನೇ ಬಾರಿಗೆ ಚಾಂಪಿಯನ್ ಆದ ಮುಂಬೈ
ಬೆಂಗಳೂರು: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ದೆಹಲಿ ವಿರುದ್ಧ ಮುಂಬೈಗೆ 4 ವಿಕೆಟ್ ಗಳ ಜಯ ಲಭಿಸಿದೆ.
ಆದಿತ್ಯ ತಾರೆ ಹಾಗೂ ಸಿದ್ದೇಶ್ ಲಾಡ್ ಅದ್ಭುತ ಜತೆಯಾಟದ ಕಾರಣ ಮುಂಬೈ ತಂಡವು ಗೆಲುವು ಸಾಧಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ದೆಹಲಿ ತಂಡ 45.4 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು.
ದೆಹಲಿ ಪರವಾಗಿ ಸಂದೀಪ್ ಸೈನಿ 3 ವಿಕೆಟ್ ಕಬಳಿಸಿದ್ದರು. ಇದರಿಂದ ಅಲ್ಪ ಗುರಿಯನ್ನು ಬೆನ್ನಟ್ಟಿದ ಮುಂಬೈ ಗೆ ಪ್ರಾರಂಭದಲ್ಲಿ ಆಗ್ತಾವೇ ಆಗಿತ್ತು. ಆದರೆ ಆದಿತ್ಯ ತಾರೆ (71) ಹಾಗೂ ಸಿದ್ದೇಶ್ ಲಾಡ್ (48) ತಂಡಕ್ಕೆ ಆಸರೆಯಾದರು.
ಈ ಜೋಡಿ ಒಟ್ಟು ೧೦೫ ರನ್ ಜತೆಯಾಟ ನೀಡಿ ಮುಂಬೈಗೆ ಗೆಲುವಿನ ಭರವಸೆ ಮೂಡಿಸಿದೆ.
ಇದರೊಡನೆ ಮುಂಬೈ ಮೂರನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದಿದ್ದರೆ ದೆಹಲಿ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು.
ಕಳೆದ ಬಾರಿಯ ಚಾಂಪಿಯನ್ ಆಗಿದ್ದ ಕರ್ನಾಟಕ ಈ ಬಾರಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹಿಂದೆ ಸರಿದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics