ವಿರಾಟ್ ಕೊಹ್ಲಿ 
ಕ್ರಿಕೆಟ್

'ವಿರಾಟ್' ಸಾಧನೆಗೆ ಇನ್ನೊಂದು ಗರಿ: ಅತಿವೇಗದಲ್ಲಿ ಏಕದಿನ ಪಂದ್ಯಗಳ 10,000 ರನ್ ಪೂರೈಸಿದ ಆಟಗಾರ ಕೊಹ್ಲಿ!

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇನ್ನೊಂದು ದಾಕಲೆ ನಿರ್ಮಿಸಿದ್ದಾರೆ. ಇದೀಗ ಅವರು ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್...

ವಿಶಾಖಪಟ್ಟಣ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇನ್ನೊಂದು ದಾಕಲೆ ನಿರ್ಮಿಸಿದ್ದಾರೆ. ಇದೀಗ ಅವರು ಏಕದಿನ ಕ್ರಿಕೆಟ್ ನಲ್ಲಿ  10,000 ರನ್ ಪೂರೈಸಿದ್ದಾರೆ.
ಈ ಮೂಲಕ ಅವರು ಇಂತಹಾ ಸಾಧನೆ ಮಾಡಿದ ಭಾರತದ ಐದನೇ ಹಾಗೂ ವಿಶ್ವದ 13ನೇ ಆಟಗಾರ ಎನಿಸಿದ್ದಾರೆ.
ಅವರು 205 ಇನ್ನಿಂಗ್ಸ್ ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ
ಕೊಹ್ಲಿ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ  ಅತಿ ವೇಗವಾಗಿ10,000 ರನ್ ಪೂರೈಸಿದ ಕ್ರಿಕೆಟಿಗರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ವಿಶೇಷವೆಂದರೆ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡೂಲ್ಕರ್ 10,000 ರನ್ ಪೂರೈಸಲು 259 ಇನ್ನಿಂಗ್ಸ್ ತೆಗೆದುಕೊಂಡರೆ ವಿರಾಟ್ ಕೊಹ್ಲಿ 205 ಇನ್ನಿಂಗ್ಸ್ ನಲ್ಲಿಯೇ ಈ ಸಾಧನೆ ಮೆರೆದಿದ್ದಾರೆ.

ಭಾರತದ ಪರವಾಗಿ ಹತ್ತು ಸಾವಿರ ರನ್ ಗಳಿಸಿದ ಕ್ರಿಕೆಟಿಗರಲ್ಲಿ ಕೊಹ್ಲಿ ಐದನೆಯವರಾಗಿದ್ದು ಇದಕ್ಕೆ ಹಿಂದೆ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ(10123), ರಾಹುಲ್ ದ್ರಾವಿಡ್(10889) ಮತ್ತು ಸೌರವ್ ಗಂಗೂಲಿ(11363) ಈ ಸಾಧನೆ ಮಾಡಿದ್ದಾರೆ.


ಇನ್ನು ಏಷ್ಯಾ ಖಂಡದ ಆಟಗಾರರೇ ಈ ಸಾಧನೆ ಮಾಡಿದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ ಎನ್ನುವುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ. ಏಷ್ಯಾ ಖಂಡದ ಹೊರಗೆ ಈ ಸಾಧನೆ ಮಾಡಿದವರೆಂದರೆ  ರಿಕಿ ಪಾಂಟಿಂಗ್, ಜಾಕ್ ಕಾಲಿಸ್ ಮತ್ತು ಬ್ರಿಯಾನ್ ಲಾರಾ ಮಾತ್ರವೇ ಆಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT