ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗಿಂತಲೂ ವೇಗವಾಗಿ ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಗಳ ದಾಖಲೆ ಬರೆದಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 81 ರನ್ ಸಿಡಿಸುತ್ತಿದ್ದಂತೆ 10 ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿದ್ದರು. 10 ವರ್ಷಗಳ ಬಳಿಕವೂ ದೇಶವನ್ನು ಪ್ರತಿನಿಧಿಸುತ್ತಿರುವುದು ದೊಡ್ಡ ಗೌರವ. ನಾನಿಲ್ಲಿ ಯಾವುದಕ್ಕಾದರೂ ಅರ್ಹವಾಗಿರುತ್ತೇನೆ ಎಂದು ನನಗೆ ಅನಿಸುತ್ತದೆ. ಯಾವುದನ್ನು ಅನುದಾನವಾಗಿ ಪಡೆಯಲು ಇಚ್ಛಿಸುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ರನ್ ಗೂ ಕಠಿಣ ಪರಿಶ್ರಮ ವಹಿಸಬೇಕಾಗುತ್ತದೆ ಎಂದರು.
ಹಲವಾರು ಯುವ ಆಟಗಾರರು ದೇಶವನ್ನು ಪ್ರತಿನಿಧಿಸಲು ತುದಿಗಾಗಲ್ಲಿ ನಿಂತಿದ್ದಾರೆ. ನನ್ನಲ್ಲೂ ಅದೇ ಅಭಿಲಾಷೆ ಇರುವುದರಿಂದ ರನ್ ಗಾಗಿ ಅದೇ ಹಸಿವು ಕಾಯ್ದುಕೊಂಡಿದ್ದೇನೆ. ವೃತ್ತಿ ಜೀವನದ ಯಾವುದೇ ಹಂದದಲ್ಲೂ ಅನುದಾನವಾಗಿ ಪಡೆಯಲು ಇಚ್ಛಿಸುವುದಿಲ್ಲ ಎಂದರು.
ದೇಶಕ್ಕಾಗಿ ಆಡುವಾಗ ಆ ಗಾಢತೆ ಎಂದಿಗೂ ಕುಂದುವುದಿಲ್ಲ. ಎಲ್ಲ ಹಂತದಲ್ಲೂ ತಂಡಕ್ಕಾಗಿ ಮಗದೊಂದು ರನ್ ಗಳಿಸುವ ಪ್ರಯತ್ನ ನನ್ನದಾಗಿರುತ್ತದೆ. ನಾನು ಯಾವತ್ತೂ ಈ ದಾಖಲೆ ಬರೆಯಲಿದ್ದೇನೆ ಅಂತ ಅಂದುಕೊಂಡಿರಲಿಲ್ಲ. ಪ್ರತಿ ಬಾರಿಯೂ ಕ್ರೀಸಿಗಿಳಿದಾಗ ತಂಡಕ್ಕಾಗಿ ಮಗದೊಂದು ರನ್ ಗಳಿಸಲಷ್ಟೇ ಬಯಸಿದ್ದೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics