ರೋಹಿತ್..ರೋಹಿತ್ ಬೇಡ, ಇಂಡಿಯಾ.. ಇಂಡಿಯಾ ಎಂದು ಕೂಗಿ; ಮೈದಾನದಲ್ಲಿ ರೋಹಿತ್ ದೇಶಪ್ರೇಮ! 
ಕ್ರಿಕೆಟ್

ರೋಹಿತ್..ರೋಹಿತ್ ಬೇಡ, ಇಂಡಿಯಾ.. ಇಂಡಿಯಾ ಎಂದು ಕೂಗಿ; ಮೈದಾನದಲ್ಲಿ ರೋಹಿತ್ ದೇಶಪ್ರೇಮ!

ಮುಂಬೈ ನಲ್ಲಿ ನಡೆದ ವೆಸ್ಟ್ ಇಂಡೀಸ್ ಪಂದ್ಯದಲ್ಲಿ162 ರನ್ ಗಳ ಪೇರಿಸಿದ ರೋಹಿತ್ ಶರ್ಮಾ ಅವರ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.

ಮುಂಬೈ ನಲ್ಲಿ ನಡೆದ ವೆಸ್ಟ್  ಇಂಡೀಸ್ ಪಂದ್ಯದಲ್ಲಿ162 ರನ್ ಗಳ ಪೇರಿಸಿದ ರೋಹಿತ್ ಶರ್ಮಾ ಅವರ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. 
ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಡುತ್ತಿದ್ದ ವೇಳೆ ರೋಹಿತ್ ಶರ್ಮಾ ಅವರು ಫೀಲ್ಡಿಂಗ್ ಮಾಡುತ್ತಿದ್ದಾಗ ಅಭಿಮಾನಿಗಳು ರೋಹಿತ್.... ರೋಹಿತ್ ಎಂದು ಕೂಗುತ್ತಿದ್ದರು. ಈ ವೇಳೆ ಅಭಿಮಾನಿಗಳಿಗೆ ಸ್ಪಂದಿಸಿದ ರೋಹಿತ್ ಶರ್ಮಾ ತಮ್ಮ ಜರ್ಸಿಯಲ್ಲಿ ಬರೆದಿದ್ದ ಇಂಡಿಯಾ ಪದವನ್ನು ತೋರಿಸಿ  ನನ್ನ ಹೆಸರು ಕೂಗುವ ಬದಲು ಇಂಡಿಯಾ ಎಂದು ಕೂಗಿ ಎಂಬ ಸಂದೇಶ ನೀಡಿದರು. 
ಅಭಿಮಾನಿಗಳು ನೆಚ್ಚಿನ ಕ್ರಿಕೆಟರ್ ಹೇಳುತ್ತಿದ್ದಂತೆಯೇ ರೋಹಿತ್ ಎಂಬ ಕೂಗನ್ನು ನಿಲ್ಲಿಸಿ ತಕ್ಷಣವೇ ಇಂಡಿಯಾ ಎಂದು ಕೂಗುವುದಕ್ಕೆ ಪ್ರಾರಂಭಿಸಿದರು. ರೋಹಿತ್ ಶರ್ಮಾ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ರೋಹಿತ್ ಶರ್ಮಾ ದೇಶಪ್ರೇಮವನ್ನು ಕಂಡು ಕ್ರಿಕೆಟ್ ಅಭಿಮಾನಿಗಳು ಮತ್ತಷ್ಟು ಸಂತಸಗೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದ್ವಿಪಕ್ಷೀಯ ಸಂಬಂಧ ವೃದ್ಧಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡಿ. 5–6 ರಂದು ಭಾರತಕ್ಕೆ ಭೇಟಿ ನಿರೀಕ್ಷೆ

ಗಾಂಧಿ ಜಯಂತಿ 2025: ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

ಸರ್ಕಾರ ವಿರುದ್ಧ ಸೋನಮ್ ವಾಂಗ್‌ಚುಕ್ ಪತ್ನಿಯಿಂದ ಕಿರುಕುಳದ ಆರೋಪ: ಪ್ರಧಾನಿ, ರಾಷ್ಟ್ರಪತಿಗಳಿಗೆ ಪತ್ರ, ಪತಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹ

ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗದು: ಸಿಎಂ ಸಿದ್ದರಾಮಯ್ಯ

RSS ಶತಮಾನೋತ್ಸವ: ಈ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ; BJP

SCROLL FOR NEXT