ಕ್ರಿಕೆಟ್

ಅಪರೂಪಕ್ಕೆ ಟೆಸ್ಟ್ ಕ್ರಿಕೆಟ್‌ಗೆ ಬಂದವನು ಟೀಂ ಇಂಡಿಯಾಗೆ ಶತ್ರುವಾದ, ಆತ ಯಾರು ಗೊತ್ತ!

Vishwanath S
ಸೌಥಾಂಪ್ಟನ್: ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಭರವಸೆ ಮೂಡಿಸಿದ್ದ ಟೀಂ ಇಂಡಿಯಾಗೆ ಶತ್ರುವಾಗಿ ಕಾಡಿದ್ದು ಮಾತ್ರ ಸ್ಪಿನ್ನರ್ ಮೊಹಿನ್ ಅಲಿ. 
ಅಪರೂಪಕ್ಕೆ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಮೊಹಿನ್ ಅಲಿಯ ಅತ್ಯುತ್ತಮ ಬೌಲಿಂಗ್ ನಿಂದಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 60 ರನ್ ಗಳಿಂದ ಸೋಲು ಕಾಣುವಂತಾಯಿತು. 
ಆತಿಥೇಯ ಇಂಗ್ಲೆಂಡ್ ನೀಡಿದ್ದ 245 ರನ್ ಗಳ ಗುರಿ ಬೆನ್ನಟ್ಟುವುದು ಟೀಂ ಇಂಡಿಯಾಗೆ ಸ್ವಲ್ಪ ಕಷ್ಟವೇ ಆಗಿದ್ದರೂ ಅಸಾಧ್ಯವೇನೂ ಆಗಿರಲಿಲ್ಲ. ಆರಂಭಿಕ ಆಟಗಾರರು ಔಟಾದ ನಂತರ ನಾಯಕ ವಿರಾಟ್ ಕೊಹ್ಲಿ ಹಾಗೂ ರಹಾನೆ ಬಲ ನೀಡಿದ್ದರು. 58 ರನ್ ಗಳಿಸಿದ್ದ ಕೊಹ್ಲಿ ಮತ್ತು 51 ರನ್ ಗಳಿಸಿದ್ದ ಅಜಿಂಕ್ಯ ರಹಾನೆ ಈ ಜೋಡಿಯನ್ನು ಮೊಹಿನ್ ಅಲಿ ಔಟ್ ಮಾಡಿ ಪೆಲಿವಿಯನ್ ಗೆ ಕಳುಹಿಸಿದ್ದೇ ಟೀಂ ಇಂಡಿಯಾದ ಸೋಲಿಗೆ ಕಾರಣವಾಯಿತು. 
ಮೊಹಿನ್ ಅಲಿ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದೇ ಅಪರೂಪಕ್ಕೆ. ಮೊಹಿನ್ ಹಲವು ದಿನಗಳಿಂದ ಟೆಸ್ಟ್ ಕ್ರಿಕೆಟ್ ಆಡಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಸ್ಥಾನ ಪಡೆದಿದ್ದು ಭಾರತದ ದುರದೃಷ್ಟವೇನೋ. ಒಟ್ಟು ನಾಲ್ಕು ವಿಕೆಟ್ ಪಡೆದ ಅಲಿ ಟೀಂ ಇಂಡಿಯಾ ಸೋಲಿಗೆ ಕಾರಣವಾದರು. 
SCROLL FOR NEXT