ಐದನೇ ಟೆಸ್ಟ್: ದಿಢೀರ್ ಕುಸಿತ ಕಂಡ ಇಂಗ್ಲೆಂಡ್, ದಿನದಾಂತ್ಯಕ್ಕೆ 198/7
ಪ್ರವಾಸಿ ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ದಿಢೀರ್ ಕುಸಿತ ಕಂಡಿದ್ದು ದಿನದಾಟದಾಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 198 ರನ್ ಪೇರಿಸಿದೆ...
ಓವೆಲ್: ಪ್ರವಾಸಿ ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ದಿಢೀರ್ ಕುಸಿತ ಕಂಡಿದ್ದು ದಿನದಾಟದಾಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 198 ರನ್ ಪೇರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಉತ್ತಮ ಆರಂಭ ಕಂಡರೂ ಭಾರತೀಯ ಬೌಲರ್ ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 198 ರನ್ ಪೇರಿಸಿದ್ದು ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ.
ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಅಲೆಸ್ಟರ್ ಕುಕ್ 71 ರನ್ ಹಾಗೂ ಮೊಹಿನ್ ಅಲಿ 50 ರನ್ ಬಾರಿಸಿದ್ದಾರೆ. ಇನ್ನು ಜೆನ್ನಿಂಗ್ಸ್ 23, ಬೆನ್ ಸ್ಟೋಕ್ಸ್ 10, ಜೋ ರೂಟ್, ಬ್ರೈಸ್ಟೋವ್ ಮತ್ತು ಕುರ್ರಾನ್ ಶೂನ್ಯ ಗಳಿಸಿ ಔಟಾಗಿದ್ದಾರೆ.
ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಇಶಾಂತ್ ಶರ್ಮಾ 3, ಜಸ್ ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದಿದ್ದಾರೆ.