ಕ್ರಿಕೆಟ್

ಪಾಕ್ ಕ್ರಿಕೆಟಿಗನನ್ನು ಕೆಣಕಿ ಮುಖಕ್ಕೆ ಉಗಿಸಿಕೊಂಡ ಭಾರತೀಯ ಪತ್ರಕರ್ತ, ವಿಡಿಯೋ ವೈರಲ್!

Vishwanath S
ದುಬೈ: 2018ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ದುಬೈನಲ್ಲಿ ನಡೆಯುತ್ತಿದ್ದು ಹಾಂಕಾಂಗ್ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. 
ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ತಂಡದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಭಾರತೀಯ ಪತ್ರಕರ್ತ ಕೇಳಿದ ಪ್ರಶ್ನೆಗೆ ನೀಡಿದ ಉತ್ತರ ಸದ್ಯ ಭಾರೀ ವೈರಲ್ ಆಗಿದೆ. 
ಇಮಾಮ್ ಉಲ್ ಹಕ್ ತನ್ನ ಚಿಕ್ಕಪ್ಪ ಪಾಕಿಸ್ತಾನ ಕ್ರಿಕೆಟ್ ದಿಗ್ಗಜ ಇನ್ಜಮಾಮ್ ಉಲ್ ಹಕ್ ರಂತೆ ಪಾಕ್ ತಂಡದಲ್ಲಿ ಸ್ಟಾರ್ ಆಟಗಾರನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅಂತೆ ಸುದ್ದಿಗೋಷ್ಠಿಯಲ್ಲಿ ಭಾರತೀಯ ಪತ್ರಕರ್ತ, ನಿಮ್ಮ ಚಿಕ್ಕಪ್ಪ ಇಮಾಮ್ ಉಲ್ ಹಕ್ ರಂತೆ ಹೆಚ್ಚಿನ ಸಮಯವನ್ನು ಮಲಗುವುದರಲ್ಲೇ ಕಳೆಯುತ್ತಿದ್ದರು. ನೀವು ಕೂಡ ಅವರಂತೆ ಹೆಚ್ಚು ಮಲಗುತ್ತೀರಾ? ಎಂದು ಪ್ರಶ್ನಿಸಿದ್ದಾರೆ. 
ಇದಕ್ಕೆ ಉತ್ತರಿಸಿದ ಇಮಾಮ್ ಉಲ್ ಹಕ್, ಈ ವಿಚಾರ ನಿಮಗೆ ಹೇಗೆ ಗೊತ್ತು, ನೀವೇನಾದ್ರು ಅವರ ಜೊತೆ ಮಲಗಿದ್ರಾ? ಎಂದು ಮರುಪ್ರಶ್ನೆ ಹಾಕಿ ಪತ್ರಕರ್ತನನ್ನು ಬೆಚ್ಚಿ ಬೀಳಿಸಿದ್ದಾರೆ. ಇವರ ಈ ಅನಿರೀಕ್ಷಿತ ಮರು ಪ್ರಶ್ನೆಗೆ ಬೆಚ್ಚಿದ ಪತ್ರಕರ್ತ ಸುಮ್ಮನಾಗಿದ್ದಾರೆ. 
ಭಾರತೀಯ ಪತ್ರಕರ್ತನಿಗೆ ಪಾಕ್ ಕ್ರಿಕೆಟಿಗ ಉತ್ತರ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
SCROLL FOR NEXT