ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಎ ಗುಂಪಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಇಂದು ಭಾರತ- ಹಾಂಗ್ ಕಾಂಗ್ ಎದುರಾಗಿದ್ದು, ಟಾಸ್ ಗೆದ್ದ ಹಾಂಗ್ ಕಾಂಗ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಹಾಂಗ್ ಕಾಂಗ್ ನಾಯಕ ಅಂಶುಮನ್ ರಾತ್ ಟಾಸ್ ಗೆದ್ದರೂ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಟೀಂ ಇಂಡಿಯಾ ಬ್ಯಾಟಿಂಗ್ ಆರಂಭಿಸಿದೆ.
ರೋಹಿತ್ ಶರ್ಮಾ ಸೇರಿದಂತೆ ಶಿಖರ್ ಧವನ್, ಕೆ. ಎಲ್. ರಾಹುಲ್, ಕೇದರ್ ಜಾದವ್, ಅವರಂತಹ ಪ್ರಮುಖ ಬ್ಯಾಟ್ಸ್ ಮನ್ ಗಳು ಹಾಗೂ ಜಸ್ಪ್ರೀತ್ ಬ್ರೂಮಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಅಂತಹ ಯಶಸ್ವಿ ಬೌಲರ್ ಗಳು ಟೀಂ ಇಂಡಿಯಾದಲ್ಲಿದ್ದಾರೆ.