ಶಿಖರ್ ಧವನ್-ಶೋಯಬ್ ಮಲಿಕ್ 
ಕ್ರಿಕೆಟ್

ಪಾಕ್ ಕ್ರಿಕೆಟಿಗ ಮಲಿಕ್‌ರನ್ನು ಭಾರತೀಯ ಕ್ರೀಡಾಭಿಮಾನಿಗಳು ಭಾವ, ಭಾವ ಅಂತ ಕರೆದಿದ್ದೇಕೆ? ವಿಡಿಯೋ ವೈರಲ್!

ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋತಿರಬಹುದು ಆದರೆ, ಪಂದ್ಯದ ವೇಳೆ ಪಾಕ್ ಆಟಗಾರ ಶೋಯಬ್ ಮಲಿಕ್ ರನ್ನು ಭಾರತೀಯ ಕ್ರೀಡಾಭಿಮಾನಿಗಳು...

ದುಬೈ: ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋತಿರಬಹುದು ಆದರೆ, ಪಂದ್ಯದ ವೇಳೆ ಪಾಕ್ ಆಟಗಾರ ಶೋಯಬ್ ಮಲಿಕ್ ರನ್ನು ಭಾರತೀಯ ಕ್ರೀಡಾಭಿಮಾನಿಗಳು ಭಾವ, ಭಾವ ಎಂದು ಕೂಗಿ ಕರೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ. 
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ನಲ್ಲಿ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಸೆಣೆಸಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನ 9 ವಿಕೆಟ್ ಗಳನ್ನು ಸೋಲು ಕಂಡಿದೆ. ಇನ್ನು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿ ತಂಡವನ್ನು ಶೋಯಬ್ ಮಲಿಕ್ 200ರ ಗಡಿ ದಾಟುವಂತೆ ಮಾಡಿದ್ದರು. 90 ಎಸೆತಗಳಲ್ಲಿ ಮಲಿಕ್ 78 ರನ್ ಗಳಿಸಿದ್ದರು. 
ಟೀಂ ಇಂಡಿಯಾ ಪಾಕಿಸ್ತಾನ ನೀಡಿದ 238 ರನ್ ಗಳ ಗುರಿ ಬೆನ್ನಟ್ಟಿತ್ತು. ಈ ವೇಳೆ ಶೋಯಬ್ ಮಲಿಕ್ ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಸ್ಟೇಡಿಯಂನಲ್ಲಿದ್ದ ಭಾರತೀಯ ಕ್ರೀಡಾಭಿಮಾನಿಗಳು ಶೋಯಬ್ ರನ್ನು ಭಾವ...ಭಾವ(ಜೀಜು..ಜೀಜು.. ಲುಕ್ ಹಿಯರ್ ಒನ್ಸ್) ಎಂದು ಕೂಗಿ ಕರೆದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. 
ಭಾರತೀಯ ಕ್ರೀಡಾಭಿಮಾನಿಗಲು ಭಾವ...ಭಾವ..ಅಂತ ಕೂಗಿ ಕರೆದಾಗ ಅಂತ ಕಡೆ ತಿರುಗಿದ ಮಲಿಕ್ ಅಭಿಮಾನಿಗಳಿಗೆ ಖುಷಿಯಿಂದ ಕೈ ಬೀಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT