ಕ್ರಿಕೆಟ್

ಭಾರತ ವಿರುದ್ಧ ಮುಖಭಂಗಕ್ಕೆ ಹೆದರಿ ಬಾಂಗ್ಲಾದೇಶಕ್ಕೆ ಶರಣಾಯ್ತಾ ಪಾಕಿಸ್ತಾನ?

Vishwanath S
ದುಬೈ: ಏಷ್ಯಾಕಪ್ ಚಾಂಪಿಯನ್ ಪಟ್ಟಕ್ಕಾಗಿ ನಾಳೆ ಭಾರತ ಹಾಗೂ ಬಾಂಗ್ಲಾದೇಶ ಸೆಣೆಸಾಡಲಿವೆ. ಇನ್ನು ನಿನ್ನೆಯ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ ಅಲ್ಪಮೊತ್ತವನ್ನು ಬಾರಿಸಿ ಫೈನಲ್ ತಲುಪುವ ಸುವರ್ಣಾವಕಾಶವನ್ನು ಬಲಿಷ್ಠ ಪಾಕಿಸ್ತಾನ ಕೈಚೆಲ್ಲಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 
ನಿನ್ನೆ ನಡೆದ ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಫೈನಲ್ ಹಂತ ಪ್ರವೇಶಕ್ಕಾಗಿ ಸೆಣೆಸಾಟ ನಡೆಸಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶಕ್ಕೆ ಮುಶ್ಫಿಕರ್ ರಹೀಂ(99) ಹಾಗೂ ಮೊಹಮ್ಮದ್ ಮಿಥುನ್(60) ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಬಾಂಗ್ಲಾದೇಶ 239 ರನ್ ಪೇರಿಸಲು ಸಾಧ್ಯವಾಯಿತು. 
ಬಾಂಗ್ಲಾದೇಶ ನೀಡಿದ 240 ರನ್ ಗಳು ಗುರಿ ಬೆನ್ನಟ್ಟಿದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 202 ರನ್ ಮಾತ್ರ ಪೇರಿಸಲು ಶಕ್ತವಾಯಿತು. ಇದರೊಂದಿಗೆ ಪಾಕ್ ಬಾಂಗ್ಲಾ ವಿರುದ್ಧ 37 ರನ್ ಗಳ ಹೀನಾಯ ಸೋಲು ಕಂಡಿತು. 
ಇನ್ನು ಅಲ್ಪಮೊತ್ತವನ್ನು ಬೆನ್ನಟ್ಟಿ ಫೈನಲ್ ಪ್ರವೇಶಿಸುವ ಸುವರ್ಣಾವಕಾಶವನ್ನು ಪಾಕಿಸ್ತಾನ ಕಳೆದುಕೊಂಡಿದೆ. ಪಾಕ್ ಫೈನಲ್ ಪ್ರವೇಶಿಸಿದ್ದರೆ ಭಾರತ ಹಾಗೂ ಪಾಕಿಸ್ತಾನ ನಡುವೆ ಜಿದ್ದಾಜಿದ್ದಿನ ಹೋರಾಟ ಕಾಣಬಹುದಾಗಿತ್ತು. 
ಇನ್ನು ಪಾಕಿಸ್ತಾನ ಅಲ್ಪಮೊತ್ತವನ್ನು ಬಾರಿಸದೆ ಬಾಂಗ್ಲಾದೇಶಕ್ಕೆ ಶರಣಾಗಿರುವುದು ಫೈನಲ್ ನಲ್ಲಿ ಭಾರತ ವಿರುದ್ಧದ ಸೋಲಿನ ಮುಖಭಂಗವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಬಾಂಗ್ಲಾಗೆ ಶರಣಾಗಿದೆ ಎಂಬ ಅನುಮಾನಗಳು ಮೂಡಿವೆ.
SCROLL FOR NEXT