ಕ್ರಿಕೆಟ್

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜಗಳ; ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಹೇಳಿದ್ದೇನು?

Vishwanath S
ಕೋಲ್ಕತ್ತಾ: ಸದ್ಯ ಕ್ರಿಕೆಟ್ ವಲಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ಜಗಳವೇ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಈ ಮಧ್ಯೆ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಇವರ ಕುರಿತು ಕೆಲ ಮಾತುಗಳನ್ನಾಡಿದ್ದಾರೆ.
ಕೊಹ್ಲಿ ಮತ್ತು ರೋಹಿತ್ ನಡುವೆ ಏನೇ ಜಗಳವಿರಬಹುದು ಮೈದಾನದಿಂದ ಹೊರಗಡೆ ಇರಬೇಕು. ಇಬ್ಬರ ನಡುವೆ ಮೈದಾನದ ಬದ್ಧತೆಯು ಎಲ್ಲಿಯವರೆಗೂ ಇರುತ್ತದೆಯೋ ಆಗ ಮಿಕ್ಕ ವಿಚಾರಗಳು ಅಪ್ರಸ್ತುತವಾಗುತ್ತದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಮೈದಾನದ ಹೊರಗೆ ವ್ಯತ್ಯಾಸಗಳು ಇರಬಹುದು ಆದರೆ ನೀವು ಮೈದಾನದಲ್ಲಿ ಹೇಗೆ ಆಡುತ್ತೀರಿ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ. ಪ್ರತಿಯೊಬ್ಬರು ಅದನ್ನು ಗಮನಿಸಬೇಕು ಎಂದು ಕಪಿಲ್ ಹೇಳಿದ್ದಾರೆ.
ಮೈದಾನದ ಹೊರಗೆ ಆಲೋಚನಾ ವಿಧಾನವು ವಿಭಿನ್ನವಾಗಿರಬಹುದು. ಆದರೆ ನೀವು ದೇಶಕ್ಕಾಗಿ ಆಡುವಾಗ ನಿಮ್ಮ ಗುರಿ ಒಂದೇ ಇರಬೇಕು. ಅದು ನೀವು ಪಂದ್ಯವನ್ನು ಹೇಗೆ ಗೆಲ್ಲಬಹುದು. ಅದು ಮುಖ್ಯ ಎಂದು ಕಪಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
SCROLL FOR NEXT