ಕ್ರಿಕೆಟ್

ಅಂತಿಮ ಟಿ20: ಚಾಹರ್ ಬೌಲಿಂಗ್ ಗೆ ವಿಡೀಸ್ ತತ್ತರ, ಭಾರತಕ್ಕೆ 147 ರನ್ ಗುರಿ

Raghavendra Adiga

ಗಯಾನ: ಭಾರತ-ವೆಸ್ಟ್ ಇಂಡೀಸ್ ನಡುವಿನ ಮೂರನೇ ಹಾಗೂ ಅಂತಿಮ ಟಿ೨೦ ಪಂದ್ಯದಲ್ಲಿ ಅತಿಥೇಯ ವಿಂಡೀಸ್ ಪೊಲಾರ್ಡ್ ಅವರ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 146 ರನ್‌ ಗಳಿಸಿದೆ. ಈ ಮೂಲಕ ಟೀಂ ಇಂಡಿಯಾದ ಗೆಲುವಿಗೆ 147 ರನ್ ಸವಾಲಿನ ಮೊತ್ತವನ್ನು ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ವಿಂಡೀಸ್ ತಂಡದ ಪ್ರಾರಂಭ ಉತ್ತಮವಾಗಿರಲಿಲ್ಲ. ಪ್ರಾರಂಭಿಕ ಆಟಗಾರರಾಗಿದ್ದ  ಸುನಿಲ್ ನರೈನ್ (2) ಹಾಗೂ ಎವಿನ್ ಲೆವಿಸ್ (10) ರನ್ ಗಳಿಸಿ ಪೆವಿಲಿಯನ್ ಸೇರಿದರೆ ಶಿಮ್ರಾನ್ ಹೆಟ್ಮಾಯೆರ್‌ (1) ರನ್ ಗಳಿಸಿ ಔಟಾದರು.

ಆ ನಂತರ ಬಂದ ಅನುಭವಿ ಆಟಗಾರ  ಕೀರಾನ್ ಪೊಲಾರ್ಡ್ಅಂಡಕ್ಕೆ ಆಸರೆಯಾಗಿ ನಿಂತರು.45 ಬಾಲ್ ಗಳಲ್ಲಿ ಪೊಲಾರ್ಡ್ 58 ರನ್ ಗಳಿಸಿ ಅತ್ಯುತ್ತಮ ಸಾಮರ್ಥ್ಯ ಪ್ರದರ್ಶಿಸಿದ್ದರು.

ಇನ್ನು ಕಾರ್ಲೊಸ್ ಬ್ರಾತ್‌ವೇಟ್ (10) ಹಾಗೂ ಫ್ಯಾಬಿಯನ್ ಅಲೆನ್ (8*) ನಿಕೋಲಸ್ ಪೂರನ್(17 ), ರೋವ್‌ಮ್ಯಾನ್ ಪೊವೆಲ್ ಅಜೇಯ 32  ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಗಿದ್ದರು.

ಟೀಂ ಇಂಡಿಯಾ ಪರ ದೀಪಕ್ ಚಾಹರ್ ನಾಲ್ಕು ರನ್ ನೀಡಿ ಹ್ಯಾಟ್ರಿಕ್ ವಿಕೆಟ್ ಪಡೆದರೆ ಸೈನಿ ಎರಡು ಚೊಚ್ಚಲ ಪಂದ್ಯವಾಡಿದ್ದ ರಾಹುಲ್ ಚಾಹರ್ ಒಂದು ವಿಕಿಟ್ ಕಿತ್ತರು.
SCROLL FOR NEXT