ಕ್ರಿಕೆಟ್

ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಮುಂದುವರಿಕೆ: ಎರಡು ವರ್ಷ ಗುತ್ತಿಗೆ ವಿಸ್ತರಣೆ

Nagaraja AB

ಮುಂಬೈ: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರವಿಶಾಸ್ತ್ರೀ ಪುನರ್ ಆಯ್ಕೆಯಾಗಿದ್ದಾರೆ. ಮಾಜಿ ಆಟಗಾರ ಕಪೀಲ್ ದೇವ್ , ಅಂಶುಮನ್ ಗಾಯಕ್ ವಾಡ್ ಮತ್ತು ಶಾಂತ ರಂಗಸ್ವಾಮಿ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಇಂದು ರವಿಶಾಸ್ತ್ರೀ ಅವರನ್ನು ಮರು ಆಯ್ಕೆ ಮಾಡಿದ್ದು, ಅವರ ಗುತ್ತಿಗೆ ಅವಧಿಯನ್ನು ನವೆಂಬರ್ 24, 2021ರವರೆಗೂ ವಿಸ್ತರಿಸಿದೆ.

ಮೂವರು ಸದಸ್ಯರು ಇಂದು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಸಂದರ್ಶನ ನಡೆಸಿದ್ದು, ರವಿಶಾಸ್ತ್ರೀ  ಮರು ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಮೈಕ್ ಹೆಸನ್ ದ್ವಿತೀಯ ಹಾಗೂ ಟೊಮ್ ಮೊಡಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ನಾಲ್ವರು ಅಭ್ಯರ್ಥಿಗಳು ಕೋಚ್ ಹುದ್ದೆಯ ರೇಸ್ ನಲ್ಲಿದ್ದರು. ಈ ಪೈಕಿ ಫಿಲ್ ಸೈಮನ್ಸ್ ಸ್ವ ಇಚ್ಟೆಯಿಂದ ಹೊರಗುಳಿದರೆ, ಹೆಸನ್ , ಮೂಡಿ, ರಾಬಿನ್ ಸಿಂಗ್ ಹಾಗೂ ಲಾಲ್  ಚಂದ್ ರಜಪೂತ್ ಅವರು ಕ್ರಿಕೆಟ್ ಸಲಹಾ ಸಮಿತಿ ಮುಂದೆ ಸಂದರ್ಶನಕ್ಕೊಳಗಾದರು. 

ಸನ್ ರೈಸರ್ಸ್ ಹೈದ್ರಾಬಾದ್ ಮಾಜಿ ಮುಖ್ಯ ಕೋಚ್ ಟಾಮ್ ಮೂಡಿ 2017ರಲ್ಲಿಯೇ ನಿರಾಕರಿಸಿದ್ದರು. ನ್ಯೂಜಿಲೆಂಡ್ ತಂಡದ ಮಾಜಿ ಕೋಚ್  ಹೆಸ್ಸನ್  ರವಿಶಾಸ್ತ್ರೀಗೆ ಪ್ರಬಲ ಪೈಪೋಟಿ ನೀಡಿದರು. ಆದರೆ, ಅಂತಿಮವಾಗಿ ರವಿಶಾಸ್ತ್ರೀ ಹುದ್ದೆ ಮರಳಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. 

SCROLL FOR NEXT