ಕ್ರಿಕೆಟ್

ಹೊಸ ಪರಂಪರೆ ನಿರ್ಮಿಸಲು ಪ್ರಯೋಗಗಳನ್ನು ಮುಂದುವರಿಸುತ್ತೇವೆ: ರವಿಶಾಸ್ತ್ರಿ

Vishwanath S

ನವದೆಹಲಿ: 2021ರ ಟಿ20 ವಿಶ್ವಕಪ್ ವರೆಗೂ ಟೀಂ ಇಂಡಿಯಾದ ಪ್ರಧಾನ ಕೋಚ್ ಆಗಿ ರವಿಶಾಸ್ತ್ರಿಯೇ ಮುಂದುವರೆಯಲಿದ್ದು ಈ ಕುರಿತು ಮಾತನಾಡಿರುವ ರವಿಶಾಸ್ತ್ರಿ ಹೊಸ ಪರಂಪರೆಯನ್ನು ನಿರ್ಮಿಸಲು ಪ್ರಯೋಗಗಳನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಬಿಸಿಸಿಐ ಟಿವಿ ಜೊತೆ ಸಂದರ್ಶನದಲ್ಲಿ ಮಾತನಾಡಿದ ರವಿಶಾಸ್ತ್ರಿ ಅವರು ಬಿಸಿಸಿಐ ಆಯ್ಕೆ ಸಮಿತಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಸಿಎಸಿಗೆ ಧನ್ಯವಾದ ಹೇಳುತ್ತೇನೆ. ಇದು ಟೀಂ ಇಂಡಿಯಾದಲ್ಲಿ ಭಾಗವಾಗುವುದು ಒಂದು ಭಾಗ್ಯ ಮತ್ತು ಗೌರವವಾಗಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. 

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರವಿಶಾಸ್ತ್ರೀ ಪುನರ್ ಆಯ್ಕೆಯಾಗಿದ್ದಾರೆ. ಮಾಜಿ ಆಟಗಾರ ಕಪೀಲ್ ದೇವ್ , ಅಂಶುಮನ್ ಗಾಯಕ್ ವಾಡ್ ಮತ್ತು ಶಾಂತ ರಂಗಸ್ವಾಮಿ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಇಂದು ರವಿಶಾಸ್ತ್ರೀ ಅವರನ್ನು ಮರು ಆಯ್ಕೆ ಮಾಡಿದ್ದು, ಅವರ ಗುತ್ತಿಗೆ ಅವಧಿಯನ್ನು ನವೆಂಬರ್ 24, 2021ರವರೆಗೂ ವಿಸ್ತರಿಸಲಾಗಿದೆ.

SCROLL FOR NEXT