ವಿರಾಟ್ ಕೊಹ್ಲಿ 
ಕ್ರಿಕೆಟ್

ಫಿರೋಜ್ ಶಾ ಕೊಟ್ಲಾ ಅಂಗಳದಲ್ಲಿ ವಿರಾಟ್ ಕೊಹ್ಲಿ ಸ್ಟ್ಯಾಂಡ್

ಭಾರತ ತಂಡದ ನಾಯಕ ಹಾಗೂ ದಾಖಲೆಗಳ ಒಡೆಯ ವಿರಾಟ್ ಕೊಹ್ಲಿ ಹೆಸರಿನಲ್ಲಿ ಅವರ ತವರು ಮೈದಾನವಾದ ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ಒಂದು ಸ್ಟ್ಯಾಂಡ್ ಗೆ ಇವರ ಹೆಸರು ಇಡಲು ನಿರ್ಧರಿಸಲಾಗಿದೆ. 

ಭಾರತ ತಂಡದ ನಾಯಕ ಹಾಗೂ ದಾಖಲೆಗಳ ಒಡೆಯ ವಿರಾಟ್ ಕೊಹ್ಲಿ ಹೆಸರಿನಲ್ಲಿ ಅವರ ತವರು ಮೈದಾನವಾದ ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ಒಂದು ಸ್ಟ್ಯಾಂಡ್ ಗೆ ಇವರ ಹೆಸರು ಇಡಲು ನಿರ್ಧರಿಸಲಾಗಿದೆ. 

ದೆಹಲಿ ಕ್ರಿಕೆಟ್ ಸಂಸ್ಥೆ ರವಿವಾರ ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ. ವಿರಾಟ್ ಕೊಹ್ಲಿ 11 ವರ್ಷಗಳ ಹಿಂದೆ ಇದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ವಿರಾಟ್ ಈ ಗೌರವಕ್ಕೆ ಪಾತ್ರರಾದ ಯುವ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಕೋಟ್ಲಾ ಮೈದಾನದ ಒಂದು ಸ್ಟ್ಯಾಂಡಿಗೆ ಈ ರೀತಿ ಹೆಸರು ಇಡುತ್ತಿರುವ ಮೂರನೇ ಆಟಗಾರ ವಿರಾಟ್ ಆಗಿದ್ದಾರೆ. ಇದಕ್ಕೂ ಮೊದಲು ಬಿಶನ್ ಸಿಂಗ್ ಬೇಡಿ ಹಾಗೂ ಮೋಹಿಂದರ್ ಅಮರ್ ನಾಥ್ ಅವರ ಹೆಸರುಗಳಲ್ಲಿ ಸ್ಟ್ಯಾಂಡ್ ಗಳಿವೆ. ಈ ಇಬ್ಬರೂ ಆಟಗಾರರು ನಿವೃತ್ತಿ ಹೊಂದಿದ ಬಳಿಕ ಸ್ಟ್ಯಾಂಡ್ ಗೆ ಅವರ ಹೆಸರನ್ನು ಇಟ್ಟು ಗೌರವಿಸಲಾಗಿತ್ತು.  
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

SCROLL FOR NEXT