ಕ್ರಿಕೆಟ್

ಸಚಿನ್‌ ಎಲ್ಲಾ ದಾಖಲೆ ಮುರಿಯುವ ಸಾಮರ್ಥ್ಯ ಕೊಹ್ಲಿಗೆ ಇದೆ, ಆ ಒಂದು ದಾಖಲೆ ಬಿಟ್ಟು: ಸೆಹ್ವಾಗ್‌

Vishwanath S

ನವದೆಹಲಿ: ಭಾರತ ಕ್ರಿಕೆಟ್‌ನಲ್ಲಿ ಒಂದು ಕಾಲದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರ ಸಾಲಿನಲ್ಲಿ ಇದೀಗ ಟೀಮ್‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಗುತ್ತಿದ್ದಾರೆ. ಸಚಿನ್‌ ಅವರ ಹಲವು ದಾಖಲೆಗಳನ್ನು ಈಗಾಗಲೇ ಕಿಂಗ್‌ ಕೊಹ್ಲಿ ಮುರಿದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್‌ ಅವರು ಈಗಿನ ತಲೆಮಾರಿನಲ್ಲಿ ವಿರಾಟ್‌ ಕೊಹ್ಲಿ ಒಬ್ಬ ಪ್ರಬುದ್ಧ ಬ್ಯಾಟ್ಸ್‌ಮನ್‌. ಅವರು ದೀರ್ಘಾವಧಿ ಸ್ಥಿರ ಬ್ಯಾಟಿಂಗ್‌ ಮಾಡುವ ಆಟಗಾರರಾಗಿದ್ದು, ಸಚಿನ್‌ ತೆಂಡೂಲ್ಕರ್‌ ಅವರ ಇನ್ನೂ ಹಲವು ದಾಖಲೆಗಳನ್ನು ಟೀಮ್‌ ಇಂಡಿಯಾ ನಾಯಕ ಮುರಿಯಲಿದ್ದಾರೆಂದು ವೀರು ಭವಿಷ್ಯ ನುಡಿದ್ದಾರೆ.

"ವಿರಾಟ್‌ ಕೊಹ್ಲಿ ಅವರು ಸಿಡಿಸುವ ಶತಕ ಹಾಗೂ ಅವರು ರನ್‌ ಗಳಿಸುವ ಹಾದಿ ಗಮನಿಸಿದಾಗ ಅವರೊಬ್ಬ ಅದ್ಭುತ ಬ್ಯಾಟ್ಸ್‌ಮನ್‌ ಎಂಬುದರಲ್ಲಿ ಅನುಮಾನವೇ ಇಲ್ಲ. ಕ್ರಿಕೆಟ್‌ ದಿಗ್ಗಜ ತೆಂಡೂಲ್ಕರ್‌ ಅವರ ಹೆಚ್ಚಿನ ದಾಖಲೆಗಳನ್ನು ಕೊಹ್ಲಿ ಮುರಿಯಲಿದ್ದಾರೆಂದು ನನಗೆ ಸ್ಪಷ್ಟತೆ ಇದೆ ಎಂದರು.

ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ 200 ಪಂದ್ಯಗಳನ್ನು ಆಡಿದ್ದು ಈ ದಾಖಲೆಯನ್ನು ಯಾರು ಸಹ ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಸದ್ಯ 77 ಪಂದ್ಯಗಳನ್ನು ಮಾತ್ರ ಆಡಿದ್ದು ಸಚಿನ್ ಅವರ ಈ ಒಂದು ದಾಖಲೆಯನ್ನು ಮುರಿಯುವುದು ಕಷ್ಟ ಎಂದು ಹೇಳಿದ್ದಾರೆ.

SCROLL FOR NEXT