ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ 318 ರನ್ ಗೆಲುವು! 
ಕ್ರಿಕೆಟ್

ಬುಮ್ರಾ, ರಹಾನೆ ಅದ್ಭುತ ಪ್ರದರ್ಶನ-ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ 318 ರನ್ ಗೆಲುವು!

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ನಲ್ಲಿ  ಅಜಿಂಕ್ಯ ರಹಾನೆ ಹಾಗೂ ಜಸ್ಪ್ರೀತ್ ಬುಮ್ರಾಅದ್ಭುತ ಪ್ರದರ್ಶನದಿಂದ ಭಾರತ 318 ರನ್ ಗಳ ಅಭೂತಪೂರ್ವ ಜಯ ಸಾಧಿಸಿದೆ. 

ಆಂಟಿಗುವಾ":ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ನಲ್ಲಿ  ಅಜಿಂಕ್ಯ ರಹಾನೆ ಹಾಗೂ ಜಸ್ಪ್ರೀತ್ ಬುಮ್ರಾಅದ್ಭುತ ಪ್ರದರ್ಶನದಿಂದ ಭಾರತ 318 ರನ್ ಗಳ ಅಭೂತಪೂರ್ವ ಜಯ ಸಾಧಿಸಿದೆ. ಅಜಿಂಕ್ಯ ರಹಾನೆ ಎರಡು ವರ್ಷಗಳಲ್ಲಿ ತಮ್ಮ ಮೊದಲ ಟೆಸ್ಟ್ ಶತಕ ಸಿಡಿಸಿದ್ದರೆ ಜಸ್ಪ್ರೀತ್ ಬುಮ್ರಾ ಆತಿಥೇಯರ  ಐದು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು.

ಇದಕ್ಕೆ ಮುನ್ನ ಟೀಂ ಇಡಿಯಾ ಅತಿಥೇಯ ವಿಂಡೀಸ್ ಗೆಲುವಿಗಾಗಿ 419 ರನ್ ಗುರಿ ನೀಡಿತ್ತು. ಆದರೆ ಗುರಿ ಬೆನ್ನತ್ತಿದ ವಿಂಡೀಸ್ ಪಡೆಯನ್ನು ಬುಮ್ರಾ ನೇತೃತ್ವದ ಭಾರತೀಯ ವೇಗಿಗಳು ಕನಿಷ್ಟ ಮೊತ್ತಕ್ಕೆ ಕಟ್ಟಿ ಹಾಕಿದ್ದರು.ನಾಲ್ಕನೇ ದಿನದ ಅಂತಿಮ ಇನ್ನಿಂಗ್ಸ್ ನಲ್ಲಿ ವಿಂಡೀಸ್ 26.5 ಓವರ್‌ಗಳಲ್ಲಿ ಕೇವಲ 100 ರನ್‌ಗಳಿಗೆ ಆಲೌಟ್ ಆಗಿದೆ.

ಬುಮ್ರಾ ಕೇವಲ ಏಳು ರನ್ ಗಳನ್ನು ನೀಡಿ ಐದು ವಿಕೆಟ್ ಪಡೆಇದ್ದರು.ಇದೇ ವೇಳೆ ವೃತ್ತಿ ಜೀವನದ ಹತ್ತನೇ ಟೆಸ್ಟ್ ಆಡಿದ ಬುಮ್ರಾ 50 ಟೆಸ್ಟ್ ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡರು.

ಇನ್ನು ಟೀಂ ಇಂಡಿಯಾ ಬೌಲರ್ ಗಳಾದ ಇಶಾಂತ್ ಶರ್ಮಾ (3/31) ಮತ್ತು ಮೊಹಮ್ಮದ್ ಶಮಿ (2/13) ವಿಕೆಟ್ ಪಡೆದರು. ಈ ಗೆಲುವಿನೊಡನೆ ಭಾರತ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

SCROLL FOR NEXT