ಕ್ರಿಕೆಟ್

95 ನಿಮಿಷ ಆಡಿದ್ರು ಕೊನೆಗೆ ಡಕೌಟ್: ಕಳಪೆ ದಾಖಲೆ ಬರೆದ ಕಮ್ಮಿನ್ಸ್, ಕ್ಲೀನ್ ಬೌಲ್ಡ್ ಮಾಡಿದ ಜಡೇಜಾ!

Vishwanath S

ಆಂಟಿಗುವಾ: ವೆಸ್ಟ್ ಇಂಡೀಸ್ ಮತ್ತು ಟೀಂ ಇಂಡಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 318 ರನ್ ಗಳೊಂದಿಗೆ ಭರ್ಜರಿ ಗೆಲುವು ದಾಖಲಿಸಿದೆ. ಇದೇ ಪಂದ್ಯದಲ್ಲಿ ವಿಂಡೀಸ್ ಆಟಗಾರ ಮಿಗುಯೆಲ್ ಕಮ್ಮಿನ್ಸ್ ಡಕೌಟ್ ಆಗುವ ಮೂಲಕ ಕಳಪೆ ದಾಖಲೆ ಮಾಡಿದ್ದಾರೆ. 

ಟೆಸ್ಟ್ ಪಂದ್ಯದಲ್ಲಿ ಮಿಗುಯೆಲ್ ಕಮ್ಮಿನ್ಸ್ ಬರೋಬ್ಬರಿ 95 ನಿಮಿಷ ಆಡಿದರು. ಈ ವೇಳೆ 45 ಎಸೆತ ಎದುರಿಸಿದ್ದರು ಕೊನೆಗೆ ರವೀಂದ್ರ ಜಡೇಜಾ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಅಧಿಕ ಸಮಯ ಕ್ರೀಸ್ ನಲ್ಲಿದ್ದು ಡಕೌಟ್ ಆದ 2ನೇ ಆಟಗಾರನಾದರು. 

1999ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ಜಾಫ್ ಅಲೋಟ್ 101 ನಿಮಿಷ ಬ್ಯಾಟಿಂಗ್ ನಡೆಸಿ ಡಕೌಟ್ ಆಗಿದ್ದರು. 2014ರಲ್ಲಿ ಜೇಮ್ಸ್ ಆಂಡರ್ಸನ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 55 ಎಸೆತ ಎದುರಿಸಿ ಡಕೌಟ್ ಆಗಿದ್ದರು. 

SCROLL FOR NEXT