ಕ್ರಿಕೆಟ್

“ಧೋನಿ-ಧೋನಿ ಎಂದು ಹೇಳಿ ಒತ್ತಡಕ್ಕೆ ನೂಕ ಬೇಡಿ”: ವಿರಾಟ್ ಕೊಹ್ಲಿ

Vishwanath S

ಹೈದರಾಬಾದ್: ಅಂಗಳದಲ್ಲಿ ರಿಷಭ್ ಪಂತ್ ಆಡುವಾಗು ಧೋನಿ-ಧೋನಿ ಎಂದು ಕೂಗಿ ಅವರನ್ನು ಒತ್ತಡಕ್ಕೆ ನೂಕಬೇಡಿ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕೇಳಿಕೊಂಡಿದ್ದಾರೆ. 

ವಿಂಡೀಸ್ ವಿರುದ್ಧ ಶುಕ್ರವಾರ ನಡೆಯಲಿರುವ ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು, ಪಂತ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಕೆಲ ದಿನಗಳಿಂದ ಪಂತ್ ಅವರು ವಿಕೆಟ್ ಹಿಂದೆ, ಮುಂದೆ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೂ ಮೊದಲು ರೋಹಿತ್ ಶರ್ಮಾ ಸಹ ಅವರ ಬೆಂಬಲಕ್ಕೆ ನಿಂತಿದ್ದರು.

ಇನ್ನು ಟೀಮ್‌ ಇಂಡಿಯಾ ಯುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರು ಇದೇ ಭಾನುವಾರ ಆರಂಭವಾಗುವ ಭಾರತ ಹಾಗೂ ವೆಸ್ಟ್ ಇಂಡೀಸ್‌ ನಡುವಿನ  ಟಿ-20 ಸರಣಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

ಭಾರತ ಹಾಗೂ ವೆಸ್ಟ್ ಇಂಡೀಸ್‌ ನಡುವೆ ಟಿ-20 ಕ್ರಿಕೆಟ್‌ ನಲ್ಲಿ ವಿಕೆಟ್ ಹಿಂದೆ ಹೆಚ್ಚು ವಿಕೆಟ್‌ ಪಡೆದು ಮುಂಚೂಣಿಯಲ್ಲಿರುವ ಧೋನಿ ಅವರ ದಾಖಲೆ ಮುರಿಯಲು ಪಂತ್‌ಗೆ ಇನ್ನು ಎರಡು ವಿಕೆಟ್‌ ಅಗತ್ಯವಿದೆ. ಪಂತ್‌ ವಿಂಡೀಸ್‌ ವಿರುದ್ಧ ಏಳು ಪಂದ್ಯಗಳಿಂದ ವಿಕೆಟ್ ಹಿಂದೆ ಮೂರು ಬಲಿ ತೆಗೆದುಕೊಂಡಿದ್ದಾರೆ. ಆದರೆ, ಧೋನಿ ಆಡಿರುವ ಏಳು ಪಂದ್ಯಗಳಿಂದ ಐದು ಬಲಿ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್‌ ವಿರುದ್ಧ ಭಾರತ ಮೂರು ಟಿ-20 ಪಂದ್ಯಗಳಾಡಲಿದ್ದು, ಪಂತ್‌ಗೆ ಧೋನಿ ದಾಖಲೆ ಮುರಿಯಲು ಅತ್ಯುತ್ತಮ ಅವಕಾಶವಿದೆ. ಈ ಪಟ್ಟಿಯಲ್ಲಿ ಮಾಜಿ ವಿಂಡೀಸ್‌ ವಿಕೆಟ್‌ ಕೀಪರ್ ದಿನೇಶ್ ರಾಮ್‌ದಿನ್ ಐದು ಬಲಿ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಆ್ಯಂಡ್ರೆ ಫ್ಲೆಚರ್ (4) ಮೂರನೇ ಸ್ಥಾನ ಹಾಗೂ ದಿನೇಶ್ ಕಾರ್ತಿಕ್ (3) ನಾಲ್ಕನೇ ಸ್ಥಾನದಲ್ಲಿದ್ದಾರೆ.

SCROLL FOR NEXT