ಕ್ರಿಕೆಟ್

ಐಪಿಎಲ್ 2020: ಓರ್ವ ಕನ್ನಡಿಗ ಸೇರಿ ಆರ್‌ಸಿಬಿ ತಂಡಕ್ಕೆ 8 ಹೊಸ ಆಟಗಾರರ ಎಂಟ್ರಿ, ಇಲ್ಲಿದೆ ಪಟ್ಟಿ!

Vishwanath S

ನವದೆಹಲಿ: ಪ್ರತಿ ಬಾರಿಯೂ ಗೆಲ್ಲುವ ಜೋಶ್ ನಲ್ಲೇ ಆರ್‌ಸಿಬಿ ತಂಡ ಕಣಕ್ಕಿಳಿಯುತ್ತಿದೆ. ಆದರೆ ಚಾಂಪಿಯನ್ ಪಟ್ಟ ಮಾತ್ರ ಕನಸಾಗಿಯೇ ಉಳಿದಿದೆ. ಇದೀಗ 2020ಯಲ್ಲಿ ನಡೆಯಲಿರುವ ಐಪಿಎಲ್ ತಂಡಕ್ಕೆ ಹೊಸ ಆಟಗಾರರನ್ನು ತಂಡ ಖರೀದಿಸಿದೆ. 

ಇಂದು ನಡೆದ ಹರಾಜಿನಲ್ಲಿ ಆ್ಯರೋನ್ ಪಿಂಚ್, ಕ್ರಿಸ್ ಮೋರಿಸ್, ಡೇಲ್ ಸ್ಟೈನ್, ಕೇನ್ ರಿಚರ್ಡಸನ್, ಇಸ್ರು ಉದಾನ, ಜೋಶ್ ಪಿಲಿಪ್, ಶಹ್ಜಾಬ್ ಅಹ್ಮದ್ ಮತ್ತು ಪವನ್ ದೇಶಪಾಂಡೆ ತಂಡವನ್ನು ಸೇರಿಕೊಂಡಿದ್ದಾರೆ. 

ಆರ್‌ಸಿಬಿ ತಂಡದಲ್ಲೇ ಉಳಿದುಕೊಂಡಿದ್ದ ಆಟಗಾರರು, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಪಾರ್ಥಿವ್ ಪಟೇಲ್, ಶಿವಂ ದುಬೆ, ಗುರುಕ್ರಿತ್ ಮನ್ ಸಿಂಗ್, ಪವನ್ ನೇಗಿ, ಮೊಯಿನ್ ಅಲಿ, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ನವದೀಪ್ ಸೈನಿ.

SCROLL FOR NEXT