ಕ್ರಿಕೆಟ್

ಭಾರತೀಯ ಕ್ರಿಕೆಟ್ ಗೆ 2019 ಅತ್ಯುತ್ತಮ ವರ್ಷಗಳಲ್ಲಿ ಒಂದಾಗಿದೆ- ವಿರಾಟ್ ಕೊಹ್ಲಿ 

Nagaraja AB

ಕಟಕ್: ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ 316 ರನ್ ಗಳ ಗುರಿ ಬೆನ್ನಟ್ಟಿ  4 ವಿಕೆಟ್ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಬಗ್ಗು ಬಡಿಯುವ ಮೂಲಕ 2-1 ಅಂತರದಿಂದ ಸರಣಿ ಗೆದ್ದುಕೊಂಡಿತು.

ಟೀಂ ಇಂಡಿಯಾಗೆ ಇದು ಈ ವರ್ಷದ ಕೊನೆಯ ಪಂದ್ಯವಾಗಿದ್ದು, ಏಕದಿನ ಕ್ರಮಾಂಕದಲ್ಲಿ ಎರಡು ಹಾಗೂ ಟೆಸ್ಟ್ ಕ್ರಮಾಂಕದಲ್ಲಿ ಅಗ್ರ ಸ್ಥಾನದಲಲಿ ಮುಂದುವರಿದಿದೆ. ವಿಶ್ವಕಪ್ ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಸೋತರೂ ಭಾರತೀಯ ಕ್ರಿಕೆಟ್ ಗೆ ಈ ವರ್ಷ ಅತ್ಯುತ್ತಮ ವರ್ಷಗಳಲ್ಲಿ ಒಂದಾಗಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಮೂವತ್ತು ನಿಮಿಷಗಳ ವಿಶ್ವಕಪ್ ಹೊರತುಪಡಿಸಿದರೆ ಇದು ಅತ್ಯುತ್ತಮ ವರ್ಷವಾಗಿದೆ. ನಾವು ಆ ಐಸಿಸಿ ಟ್ರೋಫಿಯನ್ನು ಬೆನ್ನಟ್ಟುತ್ತೇವೆ.ಆದರೆ, ಅದನ್ನು ಹೊರತುಪಡಿಸಿದರೆ ತೃಪ್ತಿಕರವಾಗಿ ಆಡಿರುವುದಾಗಿ ಪಂದ್ಯ ಮುಗಿದ ನಂತರ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ನುಡಿದರು. 

ಭಾರತೀಯ ವೇಗದ ಬೌಲಿಂಗ್ ವಿಭಾಗ ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದೆ. ಇದರಿಂದಾಗಿ ಆಗಾಗ್ಗೆ ಸ್ಪೀನರ್ ಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಇದು ಪ್ರವಾಸದ ಸಂದರ್ಭಗಳಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿದೆ ಎಂದರು. 

ಏಲ್ಲಿಯಾದರು ಯಾವ ದಿಕ್ಕಿನಲ್ಲಾದರೂ ಬೌಲಿಂಗ್ ಮಾಡುವ ವೇಗಿಗಳನ್ನು ಹೊಂದಿದ್ದು, ಸ್ಪೀನ್ನರ್ ಗಳ ಗಮನವನ್ನು ತಮ್ಮ ಕಡೆಗೆ ಸೆಳೆದಿರುವುದು ಭಾರತದ ದೊಡ್ಡ ಸಾಧನೆಯಾಗಿದೆ. ಇದರಿಂದಾಗಿ ಸ್ವದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಉತ್ತಮ ಪ್ರದರ್ಶನ ತೋರುತ್ತೇವೆ ಅನ್ನಿಸುತ್ತಿದೆ ಎಂದು ಅವರು ಹೇಳಿದರು. 

ಯುವ ಆಟಗಾರರನ್ನು ಹೊಂದಲು ಟೀಂ ಇಂಡಿಯಾ ಬಯಸುತ್ತದೆ. ಸಮಯ ಬಂದಾಗ ಅವರಿಗೆ ಅವಕಾಶ ನೀಡಲಾಗುವುದು, 
ಒತ್ತಡ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲಾಗುತ್ತದೆ. ಕೆಲ ದಿನಗಳಲ್ಲಿ ಯುವ ಆಟಗಾರನ್ನು ಬೆಳೆಸಲಾಗುವುದು ಎಂದು ಅವರು ತಿಳಿಸಿದರು. 

SCROLL FOR NEXT