ಕ್ರಿಕೆಟ್

ಭಾರತ ಕ್ರಿಕೆಟ್ ಆಡಲು ಅಸುರಕ್ಷಿತ: ಪ್ರವಾಸ ಕೈಗೊಳ್ಳುವ ತಂಡಗಳನ್ನು ಐಸಿಸಿ ತಡೆಯಬೇಕು- ಜಾವೇದ್ ಮಿಯಾಂದಾದ್

Nagaraja AB

ಲಾಹೋರ್: ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ತಂಡಗಳು ಭಾರತ ಪ್ರವಾಸ ಕೈಗೊಳ್ಳುವುದನ್ನು ಐಸಿಸಿ  ತಡೆಯಬೇಕು ಎಂದು ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ವಿವಾದಾತ್ಮಕ ಹೇಳಿಕೆ ಮೂಲಕ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. 

ಪಾಕಿಸ್ತಾನ ಮಾತ್ರವಲ್ಲ, ಭಾರತ ಕೂಡಾ ಯಾವುದೇ ಪ್ರವಾಸಿಗರಿಗೆ ಸುರಕ್ಷಿತವಾಗಿಲ್ಲ. ಮಾನವನಾಗಿ, ಕ್ರೀಡ ವಕ್ತಾರನಾಗಿ  ಭಾರತೀಯರನ್ನು ಖಂಡಿಸಬೇಕಾಗುತ್ತದೆ ಎಂದಿದ್ದಾರೆ.

ಭಾರತದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಇಡೀ ಜಗತ್ತೇ ನೋಡುತ್ತಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡುತ್ತಿವೆ. ಭಾರತದೊಂದಿಗಿನ ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಒಪ್ಪಂದಗಳನ್ನು ವಜಾಗೊಳಿಸಬೇಕು ಎಂದು ಪಾಕಿಸ್ತಾನದ ಪರವಾಗಿ ಧ್ವನಿ ಎತ್ತುತ್ತೇನೆ. ಭಾರತದ ವಿರುದ್ಧ ಎಲ್ಲಾ ರಾಷ್ಟ್ರಗಳು ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದ್ದಾರೆ.

ಇದಕ್ಕೂ ಮುಂಚೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಎಹ್ಸಾನ್ ಮಣಿ ಕೂಡಾ ಪಾಕಿಸ್ತಾನಕ್ಕಿಂತ ಭಾರತದಲ್ಲಿಯೂ ಹೆಚ್ಚಿನ ಭದ್ರತೆಯ ತೊಂದರೆ ಇದೆ ಎಂದು ಹೇಳಿದ್ದರು. 

2009ರಲ್ಲಿ ಶ್ರೀಲಂಕಾ ಟೆಸ್ಟ್ ಪಾಕಿಸ್ತಾನದಲ್ಲಿ ಟೆಸ್ಟ್ ಪಂದ್ಯವನ್ನಾಡಿದ ಕೊನೆಯ ರಾಷ್ಟ್ರವಾಗಿದೆ. ಆ ಸಂದರ್ಭದಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ಉಗ್ರರ ದಾಳಿ ನಡೆದಿತ್ತು.

SCROLL FOR NEXT