ಕ್ರಿಕೆಟ್

ಕೊಹ್ಲಿ ನಾಯಕತ್ವದ ಬ್ಲೂ ಬಾಯ್ಸ್ ನನ್ನ ಕನಸು ನನಸು ಮಾಡಿದ್ದಾರೆ: ವಿವಿಎಸ್ ಲಕ್ಷ್ಮಣ್

Vishwanath S

ನವದೆಹಲಿ: ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯ ಸಾಧಿಸಿದ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾಗೆ 2019ನೇ ವರ್ಷ ಅದ್ಭುತವಾದದ್ದು ಎಂದು ಭಾರತ ತಂಡದ ಮಾಜಿ ಬ್ಯಾಟ್ಸ್ ಮನ್ ವಿವಿಯಸ್ ಲಕ್ಷ್ಮಣ್ ಹೇಳಿದ್ದಾರೆ.
 
1947ರ ಬಳಿಕ ಮೊದಲ ಬಾರಿ ಭಾರತ ತಂಡ ಕಾಗೂರು ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಟೆಸ್ಟ್ ಸರಣಿ ಸಾಧಿಸಿತ್ತು. ಅಡಿಲೇಡ್ ನಲ್ಲಿ ಕಳೆದ ವರ್ಷ (ಡಿ. 6 ರಿಂದ 10) 31 ರನ್ ಗಳಿಂದ ಜಯ ಸಾಧಿಸಿತ್ತು. ಪರ್ತ್ ನಲ್ಲಿ ಜರುಗಿದ್ದ ಎರಡನೇ ಪಂದ್ಯದಲ್ಲಿ (ಡಿ.14 ರಿಂದ 18) ಭಾರತ 186 ರನ್ ಗಳಿಂದ ಸೋಲು ಅನುಭವಿಸಿತ್ತು. ಬಳಿಕ ಪುಟಿದೆದ್ದ ಟೀಮ್ ಇಂಡಿಯಾ ಮೆಲ್ಬೋರ್ನ್ ನ ಮೂರನೇ ಪಂದ್ಯದಲ್ಲಿ (ಡಿ. 26 ರಿಂದ 30) ಎಂಟು ವಿಕೆಟ್ ಗಳಿಂದ ಜಯ ದಾಖಲಿಸಿತು. ಬಳಿಕ, ಸಿಡ್ನಿಯಲ್ಲಿನ ನಾಲ್ಕನೇ ಟೆಸ್ಟ್ ಪಂದ್ಯ (ಜ.3 ರಿಂದ 7) ಡ್ರಾ ನಲ್ಲಿ ಸಮಾಪ್ತಿಯಾಗಿತ್ತು.

ಒಬ್ಬ ಟೆಸ್ಟ್ ಕ್ರಿಕೆಟರ್ ಆಗಿ ನಾನು ಆಸ್ಟ್ರೇಲಿಯಾ ನೆಲದಲ್ಲಿ  ಟೆಸ್ಟ್ ಸರಣಿ ಗೆಲ್ಲಬೇಕೆಂದು ಕನಸಿತ್ತು. ಆದರೆ, ನನ್ನ ಒಟ್ಟಾರೆ ವೃತ್ತಿ ಜೀವನದಲ್ಲಿ ಇದನ್ನು ಸಾಧಿಸಲು ಆಗಲೇ ಇಲ್ಲ. ಆದರೆ, ವಿರಾಟ್ ಕೊಹ್ಲಿ ನಾಯಕತ್ವದ  ಭಾರತ ತಂಡ ಪ್ರಸಕ್ತ ವರ್ಷದ ಆರಂಭದಲ್ಲಿ ನನ್ನ ಆಸೆಯನ್ನು ಈಡೇರಿಸಿದೆ. ಈ ವರ್ಷ ಟೀಮ್ ಪಾಲಿಗೆ ಅತ್ಯುತ್ತಮವಾದದ್ದು, ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ  ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿರುವುದು ತುಂಬಾ ಖುಷಿ ನೀಡಿದೆ. ಈ ಕ್ಷಣವನ್ನು ನಾನೆಂದೂ ಮರೆಯಲಾರೆ ಎಂದು ಲಕ್ಷ್ಮಣ್ ತಿಳಿಸಿದರು.

SCROLL FOR NEXT