ಕ್ರಿಕೆಟ್

ಅಂತಿಮ ಏಕದಿನ: ಧೋನಿ ಆಗಮನದಿಂದ ಟೀಂ ಇಂಡಿಯಾಗೆ ಬಲ, 4-1ರ ಗೆಲುವಿನ ನಿರೀಕ್ಷೆಯಲ್ಲಿ ಭಾರತ!

Raghavendra Adiga
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಆಡಲಿರುವುದು ಭಾರತೀಯ ತಂಡದಲ್ಲಿ ಹುರುಪನ್ನು ಹೆಚ್ಚಿಸಿದೆ.ಫೆಬ್ರವರಿ 3 ಭಾನುವಾರ ವೆಲ್ಲಿಂಗ್ಟನ್‌ನ ವೆಸ್ಟ್‌ಪ್ಯಾಕ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು ಕಡೆಯ ಪಂದ್ಯ ಗೆಲ್ಲುವ ಮೂಲಕ ಸರಣಿಯನ್ನು 4-1ರ ಅಂತರದಲ್ಲಿ ತನ್ನದಾಗಿಸಿಕೊಳ್ಳುವ ತವಕದಲ್ಲಿದೆ.
ಕಿವೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮೊದಲ ಮೂರು ಪಂದ್ಯಗಳ ಗೆದ್ದು ಸರಣಿ ಕೈವಶ ಮಾಡಿಕೊಂಡಿದ್ದ ಟೀಂ ಇಂಡಿಯಾಗೆ ನಾಲ್ಕನೇ ಪಂದ್ಯದಲ್ಲಿ ನಾಯಕ ಕೊಹ್ಲಿ ಮತ್ತು ಧೋನಿ ಅನುಪಸ್ಥಿತಿ ತೀವ್ರವಾಗಿ ಕಾಡಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿಯೂ ಭಾರತ 92 ರನ್ ಗಳಿಗೆ ಆಲೌಟ್ ಆಗುವದಲ್ಲದೆ 8ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿತ್ತು.
ಸಧ್ಯ ಗಾಯದಿಂದ ಚೇತರಿಸಿಕೊಂಡಿರುವ ಧೋನಿ ಅಂತಿಮ ಪಂದ್ಯದಲ್ಲಿ ಆಡಲಿರುವುದು ಭಾರತ ತಂಡಕ್ಕೆ ಹೊಸ ಬಲವನ್ನೇ ತಂದಿದೆ. ಈ ಪಂದ್ಯಕ್ಕೂ ರೋಹಿತ್ ಶಾರ್ಮಾ ಅವರೇ ನಾಯಕರಾಗಿದ್ದು ಇವರೊಡನೆ ಶಿಖರ್ ಧವನ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ.
ಧೋನಿಯ ಉಪಸ್ಥಿತಿಯುಪಂದ್ಯದ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಪುಷ್ಟಿಕೊಡಲಿದೆ ಎಂದು ನಿರೀಕ್ಷಿಸಲಾಗಿದೆ.
ಇನ್ನುಳಿದಂತೆ ನಾಳಿನ ಪಂದ್ಯಕ್ಕೆ ತಂಡಗಳು ಹೀಗಿದೆ-
ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಕೇದಾರ ಜಾಧವ್, ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ಶುಭಮನ್ ಗಿಲ್ಯುಜ್ವೇಂದ್ರ ಚಹಲ್, ಕುಲ್‌ದೀಪ್ ಯಾದವ್, ಮೊಹಮ್ಮದ್ ಶಮಿ, ಭುನೇಶ್ವರ್ ಕುಮಾರ್, , ಹಾರ್ದಿಕ್ ಪಾಂಡ್ಯ,  ರವೀಂದ್ರ ಜಡೇಜಾ, ವಿಜಯ್ ಶಂಕರ್ ಮತ್ತು ಖಲೀಲ್ ಅಹ್ಮದ್ 
ನ್ಯೂಜಿಲ್ಯಾಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಶ್ಟ್ಲೆ, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರಾಂಡ್‌ಹೋಮ್, ಲೂಕಿ ಫೆರ್ಗ್ಯೂಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್ (ವಿಕೆಟ್ ಕೀಪರ್), ಕಾಲಿನ್ ಮನ್ರೊ, ಜಿಮ್ಮಿ ನೀಶಂ, ಹೆನ್ರಿ ನಿಕೋಲಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ ಮತ್ತು ರಾಸ್ ಟೇಲರ್. 
ಪಂದ್ಯವು ಭಾರತೀಯ ಕಾಲಮಾನದಂತೆ ಬೆಳಿಗ್ಗೆ 7.30ಕ್ಕೆ ಪ್ರಾರಂಭವಾಗಲಿದೆ.
SCROLL FOR NEXT