ಕ್ರಿಕೆಟ್

ಪ್ರವಾಸ ಪಂದ್ಯಗಳಿಗೆ ಕುಲ್ದೀಪ್ ಯಾದವ್ ನಮ್ಮ ನಂ.1 ಸ್ಪಿನ್ನರ್: ರವಿ ಶಾಸ್ತ್ರಿ ಪ್ಲಾನ್ ಬದಲು?

Nagaraja AB

ವೆಲ್ಲಿಂಗ್ಟನ್:  ಸಿಡ್ನಿಯಲ್ಲಿ  ಇತ್ತೀಚಿಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳನ್ನು ಪಡೆದಿದ್ದ  ಕುಲ್ದೀಪ್ ಯಾದವ್  ಪ್ರವಾಸ ಪಂದ್ಯಗಳಿಗೆ ನಂಬರ್ 1 ಸ್ಪಿನ್ನರ್ ಎಂದು ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರೀ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ರಿಸ್ಟ್ ಸ್ಪಿನ್ನರ್ ಪ್ರಸಿದ್ಧಿಯಾಗುತ್ತಿದ್ದು, ಸ್ವದೇಶದಲ್ಲಿ ನಡೆಯುವ ಪಂದ್ಯಗಳಿಗೆ ನಂಬರ್ 1 ಸ್ಪೀನ್ನರ್ ಆಗಿರುವ ಜಡೇಜಾ ಹಾಗೂ ಅಶ್ವಿನ್ ಅವರನ್ನು ಕುಲ್ದೀಪ್ ಹಿಂದಿಕ್ಕಿದ್ದಾರೆ ಎಂಬುದನ್ನು ಶಾಸ್ತ್ರಿ ಸ್ಪಷ್ಟಪಡಿಸಿದ್ದಾರೆ.

ಕುಲ್ದೀಪ್ ಯಾದವ್  ಪ್ರವಾಸ ಪಂದ್ಯಗಳಲ್ಲಿ ಐದು ವಿಕೆಟ್ ಗಳಿಸಿದ್ದಾರೆ. ಹಾಗಾಗೀ ಅವರು ವಿದೇಶದಲ್ಲಿ ನಡೆಯುವ ಪಂದ್ಯಗಳಿಗೆ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ಮುಂದೆ ಹೋಗಿ, ನಾವು ಒಂದು ಸ್ಪಿನ್ನರ್ ನಿಂದ ಆಡಬೇಕಾದ್ದರೆ, ಕುಲ್ದೀಪ್ ಅವರನ್ನೇ ಆಯ್ಕೆ ಮಾಡುವುದಾಗಿ ಹೇಳಿದ್ದಾರೆ.

2018ರಲ್ಲಿ ಅಶ್ವಿನ್ ಅವರ ಕಳಪೆ ದೈಹಿಕ ಪಿಟ್ ನೆಸ್ ಕುರಿತು ಮಾತಾಡಿದ ರವಿಶಾಸ್ತ್ರೀ, ಪ್ರತಿಯೊಬ್ಬರಿಗೂ ಒಂದು ಕಾಲ ಇರುತ್ತದೆ. ಆದರೆ, ಈಗ  ಪ್ರವಾಸಿ ಪಂದ್ಯಗಳಿಗೆ  ಕುಲ್ದೀಪ್ ನಂಬರ್ 1 ಆಗಿದ್ದಾರೆ ಎಂದಿದ್ದಾರೆ.

ಸಿಡ್ನಿಯಲ್ಲಿ ಕುಲ್ದೀಪ್ ಬೌಲಿಂಗ್ ನನ್ನನ್ನು ಪ್ರಭಾವಿಸಿದೆ. ವಿದೇಶದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಮಾಡಿದ ಬೌಲಿಂಗ್ ಶೈಲಿ ಅವರನ್ನು ನಂಬರ್ 1 ಸ್ಪೀನರ್  ಆಗಿ ಮಾಡಿದೆ.  ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಭಾರತ ಗೆಲುವು ಸಾಧಿಸುವಲ್ಲಿ ಚೇತೇಶ್ವರ್ ಪೂಜಾರ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾದಿಂದ ವಾಪಾಸ್ ಬಂದ ನಂತರವೂ ಪೂಜಾರಾ ಸೌರಾಷ್ಟ್ರ ತಂಡಕ್ಕಾಗಿ ಮೂರು ಪ್ರಥಮ ದರ್ಜೆಯ ಪಂದ್ಯಗಳಲ್ಲಿ ಆಡಿದ್ದು, ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಿಂದ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಲಾಗಿದೆ  ಪೂಜಾರ ಉತ್ತಮ ಫಾರ್ಮ್ ನಲ್ಲಿದ್ದಾರೆ ಎಂದು ಹೇಳಿದ್ದಾರೆ.
SCROLL FOR NEXT