ಕ್ರಿಕೆಟ್

ಆದಿತ್ಯ ಸರ್ವಟೆ ಸ್ಪೀನ್‌ಗೆ ಮಲಗಿದ ಸೌರಾಷ್ಟ್ರ: ಸತತ ಎರಡನೇ ಬಾರಿ ವಿದರ್ಭ ಮುಡಿಗೆ ರಣಜಿ ಟ್ರೋಫಿ

Vishwanath S
ನಾಗ್ಪುರ: ಕರ್ನಾಟಕ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಚೇತೇಶ್ವರ ಪೂಜಾರ ಕ್ರೀಡಾಸ್ಫೂರ್ತಿ ಮರೆತು ಬ್ಯಾಟಿಂಗ್ ಮಾಡಿ ತಂಡವನ್ನು ಫೈನಲ್ ತಲುಪಿಸಿದ್ದರು. ಫೈನಲ್ ನಲ್ಲಿ ಸೌರಾಷ್ಟ್ರ ತಂಡವನ್ನು ಬಗ್ಗುಬಡಿಯುವ ಮೂಲಕ ವಿದರ್ಭ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ವಿದರ್ಭ ತಂಡ ಬಲಿಷ್ಠ ಸೌರಾಷ್ಟ್ರ ತಂಡವನ್ನು 78 ರನ್ ಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. 
ನಾಗ್ಪುರದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿದರ್ಭ ಮೊದಲ ಇನ್ನಿಂಗ್ಸ್ ನಲ್ಲಿ 312 ರನ್ ಗೆ ಆಲೌಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಸೌರಾಷ್ಟ್ರ 307 ರನ್ ಗಳಿಗೆ ಆಲೌಟ್ ಆಯಿತು.
5 ರನ್ ಗಳ ಮುನ್ನಡೆಯೊಂದಿಗೆ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ವಿದರ್ಭ 200 ರನ್ ಸಿಡಿಸಿ ಆಲೌಟ್ ಆಯಿತು. ಈ ಮೂಲಕ 206 ರನ್ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಸೌರಾಷ್ಟ್ರ 127 ರನ್ ಗೆ ಆಲೌಟ್ ಆಗಿ 78 ರನ್ ಗಳಿಂದ ಸೋಲು ಕಂಡಿತು.
SCROLL FOR NEXT