ಕ್ರಿಕೆಟ್

ಪಾಕ್ ಗೆ ಸ್ಪೂರ್ತಿಯಾದ ದ್ರಾವಿಡ್: ಮಾಜಿ ಆಟಗಾರರನ್ನು ಕೋಚ್ ಗಳಾಗಿ ನೇಮಕ ಮಾಡಲು ಪಿಸಿಬಿ ಚಿಂತನೆ

Raghavendra Adiga
ರಾಚಿ: ಕನ್ನಡಿಗ, ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಇದೀಗ ಪಾಕ್ ಗೆ ಸಹ ಪ್ರೇರಣೆಯಾಗಿದ್ದಾರೆ. ದ್ರಾವಿಡ್ ಅವರಿಂದ ಪ್ರೇರಣೆ ಹೊಂದಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಾವು ಸಹ ದೇಶದ ಮಾಜಿ ಕ್ರಿಕೆಟಗರನ್ನು ವಿವಿಧ ಶ್ರೇಣಿಯ ಕ್ರಿಕೆಟ್ ತಂಡದ ಕೋಚ್ (ತರಬೇತುದಾರ) ಗಳನ್ನಾಗಿ ನೇಮಕ ಮಾಡಿಕೊಳ್ಳಲು ಯೋಜಿಸಿದೆ.
ಅಂಡರ್ 19  ತಂಡ ಹಾಗೂ ಭಾರತ ಎ ತಂಡದ ಕೋಚ್ ಆಗಿ ದ್ರಾವಿಡ್ ಯಶ ಕಂಡಿದ್ದಾರೆ. ಇವರ ತರಬೇತಿಯಡಿಯಲ್ಲಿ ಕಳೆದ ವರ್ಷ ಭಾರತ ಅಂಡರ್ 19  ತಂಡ ವಿಶ್ವಕಪ್ ಸಹ ಗೆದ್ದುಕೊಂಡಿದೆ.ಇದರಿಂದ ಸ್ಪೂರ್ತಿಗೊಂಡಿರುವ ಪಿಸಿಬಿ ಪಾಕ್ ನ ಮಾಜಿ ನಾಯಕ ಯೂನಿಸ್ ಖಾನ್ ಅವರನ್ನು ಪಾಕ್ ಅಂಡರ್ 19  ತಂಡದ ತರಬೇತುದಾರ ಹಾಗೂ ಮ್ಯಾನೇಜರ ಆಗಿ ನೇಮಿಸಲು ಮುಂದಾಗಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಡಿ ದಾಟಿರುವ ಪಾಕಿಸ್ತಾನದ ಮೊದಲ ಆಟಗಾರ ಯೂನಿಸ್ ಕಾನ್ ಕಖ್ಳೆದ ವರ್ಷ ನಿವೃತ್ತರಾದರು.ಮಂಡಳಿ ತಮಗೆ ಸ್ವಾತಂತ್ರ ನೀಡಿದರೆ ನಾನು ತರಬೇತಿ ನೀಡಲು ಸಿದ್ದನಿದ್ದೇನೆ ಎಂದು ಖಾನ್ ಇದಾಗಲೇ ಸಮ್ಮತಿಯನ್ನೂ ಸೂಚಿಸಿದ್ದಾರೆ ಎನ್ನಲಾಗಿದೆ.
ಭಾರತ ಕ್ರಿಕೆಟ್ ಮಂಡಳಿ ಅಂಡರ್ 19  ತಂಡದ ಕೋಚ್ ಆಗಿ ದ್ರಾವಿಡ್ ಅವರನ್ನು ಆಯ್ಕೆ ಮಾಡಿದ್ದು ಇದರಿಂದ ಉತ್ತಮ ಫಲಿತಾಂಶ ದೊರಕಿದೆ. ವಿದೇಶಿ ಕೋಚ್‍ಗಳಿಗೆ ಹೆಚ್ಚಿನ ಅವಕಾಶವನ್ನು ನೀಡುವ ಬದಲು ದೇಶದ ಸ್ವತಃ ಕೋಚ್‍ಗಳಿಗೆ ಭಾರತ ನೀಡುತ್ತಿರುವ ಅವಕಾಶದಂತೆ ನಾವೂ ಸಹ ನಮ್ಮ ಹಿರಿಯ ಆಟಗಾರರನ್ನೇ ಕೋಚ್ ಗಳಾಗಿ ನೇಮಕ ಮಾಡಿಕೊಳ್ಳಬೇಏಕೆಂದು ಚಿಂತನೆ ನಡೆಸಿದ್ದೇವೆ ಎಂದು ಪಿಸಿಬಿ ಅಧ್ಯಕ್ಷರು ಹೇಳಿದ್ದಾರೆ.
SCROLL FOR NEXT