ಕ್ರಿಕೆಟ್

2019 ವಿಶ್ವಕಪ್ ಗೆ ಟೀಂ ಇಂಡಿಯಾದ 18 ಕ್ರಿಕೆಟಿಗರ ಪಟ್ಟಿ ರೆಡಿ, ಯಾರ್ಯಾರಿಗೆ ಸಿಗಲಿದೆ ಅವಕಾಶ?

Vishwanath S
ಮುಂಬೈ: 2019ರ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದ್ದು ಈ ಮಧ್ಯೆ ಬಿಸಿಸಿಐ ಆಯ್ಕೆ ಸಮಿತಿ ಟೂರ್ನಿಗಾಗಿ 18 ಅತ್ಯುತ್ತಮ ಆಟಗಾರರ ಪಟ್ಟಿಯನ್ನು ರೆಡಿ ಮಾಡಿದೆ.
ಪ್ರತಿಷ್ಠಿತ ವಿಶ್ವಕಪ್ ಟೂರ್ನಿಗಾಗಿ 18 ಕ್ರಿಕೆಟಿಗರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಹೇಳಿದ್ದಾರೆ. 
ಇನ್ನು ವಿಶ್ವಕಪ್ ಟೂರ್ನಿಗೂ ಮುನ್ನ ಐಪಿಎಲ್ ಟೂರ್ನಿ ಇರುವುದರಿಂದ ವಿಶ್ವಕಪ್ ಆಡುವ ಪ್ರಮುಖ ಆಟಗಾರರ ಮೇಲಿನ ಒತ್ತಡ ಕಡಿಮೆ ಮಾಡಿ, ವಿಶ್ರಾಂತಿ ನೀಡಲು ಬಿಸಿಸಿಐ ಈಗಾಗಲೇ ಐಪಿಎಲ್ ಫ್ರಾಂಚೈಸಿ ಜೊತೆ ಮಾತುಕತೆ ನಡೆಸಿದೆ.
ವಿಶ್ವಕಪ್ ದೃಷ್ಟಿಯಿಂದ ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿದೆ. ಆದರೆ 18 ಆಟಗಾರರ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಅನ್ನುವುದನ್ನು ಪ್ರಸಾದ್ ಬಹಿರಂಗ ಪಡಿಸಿಲ್ಲ.
SCROLL FOR NEXT