ಐಸಿಸಿ ಟೆಸ್ಟ್ ಶ್ರೇಣಿ: ನಂ.1 ಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ, ಕಮ್ಮಿನ್ಸ್ ನ್ನು ಹಿಂದಿಕ್ಕಿದ ರಾಬಡಾ!
ಐಸಿಸಿ ಟೆಸ್ಟ್ ಶ್ರೇಣಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ನ್ಯೂಜಿಲ್ಯಾಂಡ್ ನ ನಾಯಕ ಕೇನ್ ವಿಲಿಯಮ್ಸನ್ 897 ಪಾಯಿಂಟ್ ಗಳಿಂದ 2 ನೇ ಸ್ಥಾನದಲ್ಲಿದ್ದು, ಮೂರನೇ ಸ್ಥಾನದಲ್ಲಿ 881 ಅಂಕಗಳನ್ನು ಹೊಂದಿರುವ ಚೇತೇಶ್ವರ ಪೂಜಾರ ಅವರು 3 ನೇ ಸ್ಥಾನದಲ್ಲಿದ್ದಾರೆ.
ಫೆ.17 ರಂದು ಪ್ರಕಟವಾಗಿರುವ ಟೆಸ್ಟ್ ಶ್ರೇಣಿಯ ಪಟ್ಟಿಯಲ್ಲಿ ಕೊಹ್ಲಿ, ಪೂಜಾರ ಇಬ್ಬರನ್ನು ಬಿಟ್ಟರೆ ಟಾಪ್ 10 ಪಟ್ಟಿಯಲ್ಲಿ ಬೇರೊಬ್ಬ ಭಾರತೀಯ ಆಟಗಾರ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಇದನ್ನು ಹೊರತುಪಡಿಸಿದರೆ ಲಂಕಾದ ಕುಶಲ್ ಪೆರೆರಾ 58 ಸ್ಥಾನಗಳ ಸುಧಾರಣೆ ಕಂಡಿದ್ದಾರೆ. 15 ಟೆಸ್ಟ್ ಆಡಿದ ನಂತರ ಪೆರೆರಾ ವೃತ್ತಿ ಜೀವನದಲ್ಲೇ ಅತ್ಯುತ್ತಮವಾದ 40 ನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮ್ಮಿನ್ಸ್ ಕಾಗಿಸೊ ರಾಬಾಡಾ ಅವರನ್ನು ಹಿಂದಿಕ್ಕಿದ್ದಾರೆ. ಭಾರತದ ರವೀಂದ್ರ ಜಡೇಜಾ 794 ಪಾಯಿಂಟ್ ಗಳನ್ನು ಹೊಂದಿದ್ದು 5 ನೇ ಸ್ಥಾನದಲ್ಲಿದ್ದಾರೆ.